ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮ್ಯಾನ್ಮಾರ್: ಸೂಕಿ ಬೆಂಬಲಿತ 6ಮಂದಿಗೆ ಜೈಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮ್ಯಾನ್ಮಾರ್: ಸೂಕಿ ಬೆಂಬಲಿತ 6ಮಂದಿಗೆ ಜೈಲು
ಕಳೆದ ವರ್ಷ ಬೌದ್ಧ ಬಿಕ್ಕುಗಳ ಬೆಂಬಲದೊಂದಿಗೆ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಮ್ಯಾನ್ಮಾರ್ ಪ್ರಜಾಪ್ರಭುತ್ವ ಪರ ಪಕ್ಷದ ಆರು ಮಂದಿ ಸದಸ್ಯರಿಗೆ ದೀರ್ಘವಧಿಯ ಜೈಲು ಶಿಕ್ಷೆ ವಿಧಿಸಿರುವುದಾಗಿ ಪಕ್ಷದ ವಕ್ತಾರ ಶನಿವಾರ ತಿಳಿಸಿದ್ದಾರೆ.

ಮಂಡಾಲೆಯ್‌ನ ಸೆಂಟ್ರಲ್ ಸಿಟಿಯ ನ್ಯಾಯಾಲಯ ಶುಕ್ರವಾರ ಆರು ಮಂದಿಗೆ ಶಿಕ್ಷೆ ವಿಧಿಸಿರುವುದಾಗಿ ನ್ಯಾಷನಲ್ ಲೀಗ್ ಆಫ್ ಡೆಮೊಕ್ರಸಿ(ಎನ್‌ಎಲ್‌ಡಿ)ಯ ನ್ಯಾನ್ ವಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಶಿಕ್ಷೆಗೆ ಒಳಗಾದ ಪಕ್ಷದ ಆರು ಮಂದಿಗೆ 2 ರಿಂದ 13 ವರ್ಷದವರೆಗೆ ಸೆರೆಮನೆ ಶಿಕ್ಷೆಯನ್ನು ನೀಡಲಾಗಿದೆ. ರಾಜ್ಯದಲ್ಲಿನ ಶಾಂತಿ-ಸುವ್ಯವಸ್ಥೆಯನ್ನು ಹಾಳುಗೆಡವಿದ ಆರೋಪವನ್ನು ಅವರ ವಿರುದ್ದ ದಾಖಲಾಗಿತ್ತು ಎಂದು ವಿನ್ ವಿವರಿಸಿದರು.

ಅಲ್ಲದೇ ಎನ್‌ಎಲ್‌ಡಿಯ ಮಂಡಾಲೆಯ್‌ನ ಸದಸ್ಯರಾದ ವಿನ್ ಮಾಯ್ ಮಾಯ್ ಹಾಗೂ ಕಾನ್ ತುನ್‌ಗೆ 12ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಎನ್‍ಎಲ್‌ಡಿಯ ಮತ್ತೊಬ್ಬ ಕಾರ್ಯಕರ್ತ ಮಿನ್ ಥೂಗೆ 13 ವರ್ಷ, ಥಾನ್ ಲೂವಿನ್‌ಗೆ 8 ವರ್ಷ, ವಿನ್ ಶ್ವೇ‌ಗೆ 11ವರ್ಷ ಹಾಗೂ ಟಿನ್ ಕೋ ಕೋಗೆ ಎರಡು ವರ್ಷ ಶಿಕ್ಷೆ ನೀಡಿದ್ದು, ನಾವು ಈ ಬಗ್ಗೆ ಶೀಘ್ರವೇ ಮೇಲ್ಮನವಿ ಸಲ್ಲಿಸುವುದಾಗಿ ವಿನ್ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಲಿನ್ ವಿರುದ್ಧ ಚಾವೇಜ್ ವಾಗ್ದಾಳಿ
ಶ್ರೀಲಂಕಾ ಪ್ರವಾಹ:76 ಸಾವಿರ ಜನರು ಅತಂತ್ರ
ಬಾಲಿ ಸ್ಫೋಟ: 3 ಉಗ್ರರಿಗೆ ಗಲ್ಲು
ಭಾರತ-ಪಾಕ್:ಶಂಕಿತ ಉಗ್ರರ ಹೆಸರು ವಿನಿಮಯ
ಬೀಜಿಂಗ್:ಸಿಂಗ್- ಗಿಲಾನಿ ಮಾತುಕತೆ
ಐಎಸ್ಐ ವರಿಷ್ಠ ಅಮೆರಿಕಕ್ಕೆ ಭೇಟಿ