ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಿನ್ ಲಾಡೆನ್ ನೆನಪುಗಳನ್ನು ಬರೆಯುತ್ತಾನಂತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿನ್ ಲಾಡೆನ್ ನೆನಪುಗಳನ್ನು ಬರೆಯುತ್ತಾನಂತೆ
ವಿಶ್ವದ ಅತ್ಯಂತ ಬೇಕಾಗಿರುವ ಉಗ್ರ, ಅಲ್-ಖೈದಾ ಮುಖ್ಯಸ್ಥ ಕುಖ್ಯಾತ ಒಸಮಾ ಬಿನ್ ಲಾಡೆನ್ ತನ್ನ ಭಯೋತ್ಪಾದನಾ ಜಾಲದ ಹೋರಾಟದ ನೆನಪುಗಳ ಕುರಿತು ಪುಸ್ತಕ ಬರೆಯುತ್ತಿದ್ದಾನಂತೆ!

ND
ತನ್ನ ಸಂಘಟನೆ ಅಲ್-ಖೈದಾ ವಿರುದ್ಧದ 'ಅಪಪ್ರಚಾರ'ವನ್ನು ತಡೆಯಲು ಬಿನ್ ಲಾಡೆನ್ ಪುಸ್ತಕ ಬರೆಯಲು ಮುಂದಾಗಿದ್ದಾನೆ ಎಂದು ಪಾಕಿಸ್ತಾನದ ಜಿಯೋ ಸುದ್ದಿವಾಹಿನಿ ವರದಿ ಮಾಡಿದೆ. ಮೂಲತಃ ಆತ ಅರೇಬಿಕ್ ಭಾಷೆಯಲ್ಲಿ ಪುಸ್ತಕವನ್ನು ಬರೆಯುತ್ತಿದ್ದು, ಇದನ್ನು ಬಳಿಕ ಇಂಗ್ಲೀಷ್‌ಗೆ ಭಾಷಾಂತರಿಸಲಾಗುವುದು.

ಮಧ್ಯಪ್ರಾಚ್ಯದ ಹಿನ್ನೆಲೆ ಇರುವ ಒಬ್ಬ ಯುವಕನ ಸಹಾಯದೊಂದಿಗೆ ಲಾಡೆನ್ ಪುಸ್ತಕ ಬರೆಯಲು ಮುಂದಾಗಿದ್ದು, ಆ ಯುವಕ ಬಳಿಕ ಇದನ್ನು ಆಂಗ್ಲ ಭಾಷೆಗೆ ಅನುವಾದ ಮಾಡಲಿದ್ದಾನೆ ಎಂದು ಜಿಯೋ ಹೇಳಿದೆ. ಪುಸ್ತಕವು ಮುಸ್ಲಿಮರ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಎಸಗಿರುವ ದೌರ್ಜನ್ಯವನ್ನು ಎತ್ತಿತೊರಿಸಲಿದೆ ಎಂದು ಹೇಳಲಾಗಿದೆ.

ಮಧ್ಯಯುಗದ ಪ್ರಚಾರಗಳಿಂದಾಗಿ ಪಾಶ್ಚಾತ್ಯ ಪ್ರಭಾವದ ವೃದ್ಧಿಯ ಜಾಗತಿಕ ವಿದ್ಯಮಾನಗಳ ಮೇಲೆ ಹೇಗೆ ಪರಿಣಾಮ ಬೀರಿತು ಮತ್ತು ಒಟ್ಟಾರೆಯಾಗಿ ಮುಸ್ಲಿಂ ರಾಷ್ಟ್ರಗಳಲ್ಲಿರುವ ತೈಲ ಸಂಪತ್ತಿನ ಮೇಲೆ ಹೇಗೆ ಅಮೆರಿಕ ನಿಯಂತ್ರಣ ಸಾಧಿಸಿತು ಎಂಬುದನ್ನು ಒಸಮಾ ತನ್ನ ಪುಸ್ತಕದಲ್ಲಿ ಹೇಳಲಿದ್ದಾನಂತೆ.

ಪುಸ್ತಕವು ಅಲ್-ಖೈದಾ ಸಂಘಟನೆಯ ಉದಯ ಹಾಗೂ ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆಸಿದ 9/11ದಾಳಿಯನ್ನು ವಿವರಿಸಲಿದೆ.

ರಿಯಾದ್‌ನಲ್ಲಿ 1957ರ ಮಾರ್ಚ್ 10ರಂದು ಜನಿಸಿದ ಒಸಮಾ, ಸೌದಿ ಅರೇಬಿಯಾದ ಬಿನ್ ಲಾಡೆನ್ ಕುಟುಂಬಕ್ಕೆ ಸೇರಿದ ಒಬ್ಬ ಪ್ರಮುಖ ಸದಸ್ಯ. ಈತ ಎಫ್‌ಬಿಐಗೆ ಅತ್ಯಂತ ಬೇಕಾಗಿರುವ 10 ದೇಶಭ್ರಷ್ಟರಲ್ಲಿ ಒಬ್ಬನಾಗಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮ್ಯಾನ್ಮಾರ್: ಸೂಕಿ ಬೆಂಬಲಿತ 6ಮಂದಿಗೆ ಜೈಲು
ಪಾಲಿನ್ ವಿರುದ್ಧ ಚಾವೇಜ್ ವಾಗ್ದಾಳಿ
ಶ್ರೀಲಂಕಾ ಪ್ರವಾಹ:76 ಸಾವಿರ ಜನರು ಅತಂತ್ರ
ಬಾಲಿ ಸ್ಫೋಟ: 3 ಉಗ್ರರಿಗೆ ಗಲ್ಲು
ಭಾರತ-ಪಾಕ್:ಶಂಕಿತ ಉಗ್ರರ ಹೆಸರು ವಿನಿಮಯ
ಬೀಜಿಂಗ್:ಸಿಂಗ್- ಗಿಲಾನಿ ಮಾತುಕತೆ