ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌ಟಿಟಿಇ ನಿಷೇಧ ಹಿಂತೆಗೆತಕ್ಕೆ ಪ್ರಭಾಕರನ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ನಿಷೇಧ ಹಿಂತೆಗೆತಕ್ಕೆ ಪ್ರಭಾಕರನ್ ಆಗ್ರಹ
PTI
ತಮಿಳು ಜನರ ಅಭಿಲಾಶೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್‌ಟಿಟಿಇ ವಿರುದ್ಧ ಹೇರಿರುವ ನಿಷೇಧವನ್ನು ಭಾರತವು ಹಿಂತೆಗೆದುಕೊಳ್ಳಬೇಕು ಎಂದು ಎಲ್‌ಟಿಟಿಇ ಮುಖ್ಯಸ್ಥ ವಿ.ಪ್ರಭಾಕರನ್ ಭಾರತಕ್ಕೆ ಕರೆ ನೀಡಿದ್ದಾರೆ.

'ನಮ್ಮ ಸಂಘಟನೆಯ ಮೇಲಿರುವ ನಿಷೇಧವನ್ನು ಹಿಂತೆಗೆದು ತಮಿಳು ಜನರ ಅಭಿಲಾಶೆಗಳನ್ನು ಪೂರೈಸಲು ಭಾರತವು ಸಹಕಾರ ನೀಡಲಿದೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ 'ಎಂದು 53 ವರ್ಷದ ಎಲ್‌ಟಿಟಿಇ ನಾಯಕ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಭದ್ರತಾ ಪಡೆಗಳು ಎಲ್‌ಟಿಟಿಇಯ ಪ್ರಮುಖ ಪ್ರದೇಶಗಳ ಆಕ್ರಮಣಕ್ಕೆ ಮುಂದಾಗಿರುವುದಾಗಿ ಹೇಳಿದ ಅವರು, ಏನೇ ಆದರೂ, ಎಲ್‌ಟಿಟಿಇಯ ಆಡಳಿತ ರಾಜಧಾನಿ ಕಿಲಿನೊಚ್ಚಿಯನ್ನು ಭದ್ರತಾ ಪಡೆಗಳು ವಶಪಡಿಸುವುದು ಕನಸಿನ ಮಾತು ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀಲಂಕನ್ ತಮಿಳರಿಗೆ ಸೂಕ್ತ ಭದ್ರತೆ ಮತ್ತು ಪರಿಹಾರ ಕ್ರಮಗಳನ್ನು ನೀಡಬೇಕೆನ್ನುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಲುವನ್ನು ತಮಿಳು ನಿಯತಕಾಲಿಕ ಪತ್ರಿಕೆ ನಕ್ಕೀರನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಭಾಕರನ್ ಸ್ವಾಗತಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್-ಯುಎಸ್ ಕ್ಷಿಪಣಿ ದಾಳಿ:20 ಬಲಿ
ಸಿಂಗ್, ಹು ನಡುವೆ ಗಡಿ ಸಮಸ್ಯೆ ಮಾತುಕತೆ
ಬಿನ್ ಲಾಡೆನ್ ನೆನಪುಗಳನ್ನು ಬರೆಯುತ್ತಾನಂತೆ
ಮ್ಯಾನ್ಮಾರ್: ಸೂಕಿ ಬೆಂಬಲಿತ 6ಮಂದಿಗೆ ಜೈಲು
ಪಾಲಿನ್ ವಿರುದ್ಧ ಚಾವೇಜ್ ವಾಗ್ದಾಳಿ
ಶ್ರೀಲಂಕಾ ಪ್ರವಾಹ:76 ಸಾವಿರ ಜನರು ಅತಂತ್ರ