ಅಮೆರಿಕ ಅಧ್ಯಕ್ಷಗಾದಿ ಸ್ಪರ್ಧಾಳು ಡೆಮೋಕ್ರಟ್‌ನ ಬರಾಕ್ ಒಮಾಮ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ಎಫ್‍ಬಿಐ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಮಂಗಳವಾರ ತಿಳಿಸಿದೆ.
ಬರಾಕ್ ಒಬಾಮ ಅವರನ್ನು ಶೂಟ್ ಔಟ್ ಮಾಡುವ ಮೂಲಕ ಹತ್ಯೆಗೈಯುವ ಸಂಚು ರೂಪಿಸಲಾಗಿದ್ದು, ಇದೀಗ ಪ್ರಕರಣದ ಜಾಡು ಹಿಡಿದು ಹೊರಟಿರುವ ಎಫ್‌ಬಿಐ ಇದೀಗ ಇಬ್ಬರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದು ಮಹತ್ವದ ಮಾಹಿತಿಗಳು ಲಭ್ಯವಾಗುವ ಸಾಧ್ಯತೆಗಳಿವೆ.
ಒಬಾಮ ಅವರನ್ನು ಹತ್ಯೆಗೈಯುವುದೇ ತಮ್ಮ ಮುಖ್ಯ ಗುರಿಯಾಗಿತ್ತು ಎಂದು ಬಂಧಿತರು ತಿಳಿಸಿರುವುದಾಗಿ ಜಿಮ್ ಕಾವಾನೌ ಅವರು ತಿಳಿಸಿದ್ದು, ಅವರಿಗೆ ಒಬಾಮ ಅವರನ್ನು ಕೊಲ್ಲುತ್ತೇವೆ ಎಂಬ ಖಚಿತತೆ ಇರಲಿಲ್ಲವಂತೆ, ಆದರೆ ಕೊಲ್ಲುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಒಬಾಮ ಹತ್ಯೆಗೆ ಸಂಬಂಧಿಸಿದಂತೆ ಡೇನಿಯಲ್ ಕೌವರ್ಟ್(20) ಹಾಗೂ ಪೌಲ್ ಚೆಲ್‌ಸ್ಸೆಲ್‌ಮನ್(18) ಅವರನ್ನು ಬಂಧಿಸಲಾಗಿದ್ದು,ಅವರಿಂದ ರೈಫಲ್, ಶಾಟ್‌ಗನ್ ಮತ್ತು ಮೂರು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.
ನವೆಂಬರ್ 4ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಇದೀಗ ಡೆಮೋಕ್ರಟ್‌ನ ಬರಾಕ್ ಒಮಾಬ ಮತ್ತು ರಿಪಬ್ಲಿಕ್‌ನ ಜಾನ್ ಮೆಕೈನ್ ಅಖಾಡದಲ್ಲಿದ್ದಾರೆ.
ಇತ್ತೀಚೆಗಷ್ಟೇ ಬರಾಕ್ ಒಮಾಬ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ, ಬರಾಕ್ ಈವರೆಗೂ ಹತ್ಯೆಯಾಗದೆ ಬದುಕಿ ಉಳಿದಿರುವುದೇ ಒಂದು ದೊಡ್ಡ ಪವಾಡ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. |