ದಕ್ಷಿಣ ಫಿಲಿಪೈನ್ಸ್‌ನಲ್ಲಿ ಮುಸ್ಲಿಮ್ ಪ್ರತ್ಯೇಕತವಾದಿಗಳು ಮತ್ತು ಸೈನ್ಯದ ನಡುವೆ ನಡೆದ ಕಾಳಗದಲ್ಲಿ ಒಬ್ಬ ಸೈನಿಕ ಸಹಿತ ಏಳು ಮಂದಿ ಮುಸ್ಲಿಮ್ ಪ್ರತ್ಯೇಕತವಾದಿಗಳು ಹತರಾಗಿದ್ದಾರೆ ಎಂದು ಮಿಲಿಟರಿ ವಕ್ತಾರರು ಮಂಗಳವಾರ ತಿಳಿಸಿದರು.
ಸೋಮವಾರದಂದು ಮಿಂದನಾವೋ ದ್ವೀಪದ ಮಮಸಾಫನೋ ಪಟ್ಟಣದಲ್ಲಿ ನಡೆದ ಗುಂಡಿನ ಚಕಮಕಿಯು ಸುಮಾರು ಎರಡು ಗಂಟೆಗಳ ಕಾಲ ನಡೆಯಿತೆಂದು ಮಿಲಿಟರಿ ವಕ್ತಾರ ಮೇಜರ್ ರಾಂಡೋಫ್ ಕೆಬಂಗ್‌ಬಂಗ್ ತಿಳಿಸಿದರು.
ಮೊರೋ ಇಸ್ಲಾಮಿಕ್ ಲಿಬರೇಷನ್ ಫ್ರಂಟ್(ಎಮ್‌ಐಎಲ್‌ಎಫ್)ನ ಸಕ್ರಿಯ ಕಾರ್ಯಕರ್ತರಾದ ಏಳು ಮಂದಿ ಬಂದೂಕುದಾರಿಗಳ ಶವಗಳನ್ನು ಸರಕಾರಿ ಪಡೆಗಳು ಪತ್ತೆಹಚ್ಚಿವೆ. ಈ ಕಾಳಗದಲ್ಲಿ ಒಬ್ಬ ಸೈನಿಕ ಮೃತಪಟ್ಟಿದ್ದು ಇತರ ನಾಲ್ಕು ಮಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದರು.
ರಾಷ್ಟ್ರಪತಿ ಗ್ಲೋರಿಯಾ ಅರೊಯೋಯವರ ಸರಕಾರದೊಂದಿಗಿನ ಶಾಂತಿ ಮಾತುಕತೆಯು ಮುರಿದುಬಿದ್ದ ಬಳಿಕ ಮಿಂದನಾವೊ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಲ್ಲಿ 12,000ಸಾವಿರಷ್ಟು ಎಮ್‌ಐಎಲ್‌ಎಫ್ ಇಸ್ಲಾನಿಕ್ ಸಂಘಟನೆಯ ಕಾರ್ಯಕರ್ತರು ಹಿಂಸಾಚಾರ ಕೃತ್ಯದಲ್ಲಿ ತೊಡಗಿದ್ದಾರೆ. ಪರಿಣಾಮ ಹಲವಾರು ನಾಗರಿಕರು ಸಾವನ್ನಪ್ಪಿದ್ದು, ಸುಮಾರು ಐದು ಲಕ್ಷದಷ್ಟು ಮಂದಿ ಸ್ಥಳ ತೊರೆದಿದ್ದಾರೆ. |