ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತದಲ್ಲಿ ಕ್ರೈಸ್ತರಿಗೂ ಬದುಕಲು ಬಿಡಿ: ಪೋಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಲ್ಲಿ ಕ್ರೈಸ್ತರಿಗೂ ಬದುಕಲು ಬಿಡಿ: ಪೋಪ್
ಜೀವ ಬೆದರಿಕೆಯಿಂದ ಬದುಕುತ್ತಿರುವ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ರಕ್ಷಣೆ ನೀಡಬೇಕು ಎಂದು ಪೋಪ್ ಬೆನೆಡಿಕ್ಟ್ ಅವರು ಭಾರತ ಮತ್ತು ಇರಾಕ್ ಸರ್ಕಾರ ಹಾಗೂ ಧಾರ್ಮಿಕ ಮುಖಂಡರುಗಳಿಗೆ ಕರೆ ನೀಡಿದ್ದಾರೆ.

ಅವರು ಸೈಂಟ್ ಪೀಟರ್ಸ್ ಚರ್ಚ್‌‌ನಲ್ಲಿ ವಾರದ ಆಶೀರ್ವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಈ ಎರಡು ದೇಶಗಳಲ್ಲಿ ಕ್ರಿಶ್ಚಿಯನ್ ಸಮುದಾಯ ಧಾರ್ಮಿಕತೆ ಹೆಸರಿನ ದಾಳಿಯಲ್ಲಿ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ಈ ನಿಟ್ಟಿನಲ್ಲಿ ಕ್ರೈಸ್ತರ ರಕ್ಷಣೆಯತ್ತ ಅಂತಾರಾಷ್ಟ್ರೀಯ ಸಮುದಾಯ ಕೂಡ ಗಮನಹರಿಸುವಂತೆ ಕರೆ ನೀಡುವುದಾಗಿ ಹೇಳಿದರು. ಅಲ್ಲದೇ ಈ ಎರಡು ದೇಶಗಳಲ್ಲಿ ಕ್ರೈಸ್ತರನ್ನು ಗುರಿಯಾಗಿರಿಸಿ ನಡೆಸಿದ ಹಿಂಸಾಚಾರದಲ್ಲಿ ಧಾರ್ಮಿಕ ಗುರುಗಳು ವಿಶ್ವಾಸ ಕಳೆದುಕೊಂಡಿದ್ದಲ್ಲದೆ, ಆಸ್ತಿ-ಪಾಸ್ತಿ ಹಾಗೂ ಜೀವವನ್ನು ಕಳೆದುಕೊಂಡಿರುವುದಾಗಿ ಅವರು ಕಳವಳ ವ್ಯಕ್ತಪಡಿಸಿದರು.

ಅದಕ್ಕಾಗಿ ಭಾರತ ಮತ್ತು ಇರಾಕ್‌ನಲ್ಲಿರುವ ಕ್ರೈಸ್ತ ಸಮುದಾಯದ ಬಗ್ಗೆ ಚಿಂತಿಸುವಂತಾಗಿದೆ ಎಂದರು. ಇರಾಕ್ ಉತ್ತರಭಾಗದ ಮೌಸುಲ್ ಪ್ರದೇಶದಲ್ಲಿ ಇರುವ ಕ್ರೈಸ್ತ ಸಮುದಾಯದ ಮೇಲೆ ದಾಳಿ ನಡೆಸಲಾಯಿತು ಹಾಗೂ ಜೀವ ಬೆದರಿಕೆಯನ್ನೂ ಒಡ್ಡಲಾಗಿತ್ತು.

ಅದೇ ರೀತಿ ಭಾರತದ ಒರಿಸ್ಸಾದಲ್ಲೂ ಹಿಂದೂ ಮುಖಂಡರೊಬ್ಬರನ್ನು ಹತ್ಯೆಗೈದ ಘಟನೆಯ ನಂತರ ನಡೆದ ಹಿಂಸಾಚಾರದಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿರಿಸಿ ದಾಳಿ ನಡೆಸಲಾಯಿತು, ಹಲವಾರು ಚರ್ಚ್‌ಗಳು ಧ್ವಂಸಗೊಂಡವು, ಹಿಂಸಾಚಾರದಲ್ಲಿ 35ಮಂದಿ ಸಾವನ್ನಪ್ಪಿದ್ದರು ಎಂದು ಹೇಳಿದರು.

ಪುರಾತನ ಸಂಸ್ಕೃತಿಯನ್ನು ಹೊಂದಿರುವ ಈ ಎರಡು ದೇಶಗಳಲ್ಲಿ, ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ ಬಾಳ್ವೆ ನಡೆಸುವುದನ್ನು ಕಲಿಸಿದೆ. ಅಲ್ಲದೇ ಭಾರತದಲ್ಲಿ ನೆಲದಲ್ಲಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯ ಬಹಳಷ್ಟು ಕೊಡುಗೆಗಳನ್ನು ನೀಡಿದೆ ಎನ್ನುವುದನ್ನು ತಿಳಿದು ತಮ್ಮ ತಾಯ್ನೆಲದಲ್ಲಿ ಅವರಿಗೂ ಬದಕಲೂ ಅವಕಾಶ ಮಾಡಿಕೊಡುತ್ತದೆ ಎಂಬ ನಂಬಿಕೆ ತನಗಿದೆ ಎಂದು ಪೋಪ್ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಹಾಗಂತ ತಾನು ಕ್ರೈಸ್ತ ಸಮುದಾಯಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿಕೊಡಿ ಎಂದು ಕೇಳುತ್ತಿಲ್ಲ ಎಂದ ಅವರು, ಭಾರತದಲ್ಲಿ ಕನಿಷ್ಟ ಪಕ್ಷ ಅವರಿಗೆ ಬದುಕುವ ಅವಕಾಶ ಕೊಡಿ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಿಲಿಪೈನ್ಸ್: ಹಿಂಸಾಚಾರಕ್ಕೆ ಎಂಟು ಬಲಿ
ಒಬಾಮ ಹತ್ಯೆ ಸಂಚು-ಇಬ್ಬರ ಬಂಧನ
ಎಲ್‌ಟಿಟಿಇ ನಿಷೇಧ ಹಿಂತೆಗೆತಕ್ಕೆ ಪ್ರಭಾಕರನ್ ಆಗ್ರಹ
ಪಾಕ್-ಯುಎಸ್ ಕ್ಷಿಪಣಿ ದಾಳಿ:20 ಬಲಿ
ಸಿಂಗ್, ಹು ನಡುವೆ ಗಡಿ ಸಮಸ್ಯೆ ಮಾತುಕತೆ
ಬಿನ್ ಲಾಡೆನ್ ನೆನಪುಗಳನ್ನು ಬರೆಯುತ್ತಾನಂತೆ