ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್: ತಂದೆಯ ಎದುರು ಮಗಳ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್: ತಂದೆಯ ಎದುರು ಮಗಳ ಹತ್ಯೆ
ಭೂದಾಹದ ಹಿನ್ನೆಲೆಯಲ್ಲಿ ತಮ್ಮ 17 ವರ್ಷದ ಮಗಳ ಮೇಲೆ ಅಳಿಯ ಮಹಾಶಯ ನಾಯಿಗಳನ್ನು ಛೂ ಬಿಟ್ಟು ಭೀಕರವಾಗಿ ಗಾಯಗೊಳಿಸಿ, ಗೌರವ ಹತ್ಯೆಯ ನೆಪದಲ್ಲಿ ಮಗಳನ್ನು ತಮ್ಮ ಸಮ್ಮುಖದಲ್ಲಿ ಕೊನೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಮೃತಳ ತಂದೆ ಆರೋಪಿಸಿದ್ದಾನೆ.

ತಸ್ಲೀಮ್ ಸೋಲಂಗಿ ಹತ್ಯೆಯ ವರದಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಮಹಿಳಾ ಸಂಸದರು ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ದೇಶದ ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೆಷ್ಟು ದಿನಗಳ ಕಾಲ ಮಹಿಳೆಯನ್ನು ಸಜೀವವಾಗಿ ಸಮಾಧಿ ಮಾಡಲಾಗುವುದು? ಹಸಿದ ನಾಯಿಗಳಿಗೆ ಮಹಿಳೆ ಬಲಿಯಾಗುತ್ತಿರುವ ದಿನಗಳಿಗೆ ಅಂತ್ಯವಿಲ್ಲವೇ?ಮಹಿಳೆಯರಿಗೆ ನಿಜವಾದ ಹಕ್ಕುಗಳನ್ನು ನೀಡಲಾಗುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿಮಿ ಸಿದ್ದಿಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ತಸ್ಲೀಮಾ ಹತ್ಯೆಯ ಆರೋಪದ ಮೇಲೆ 28ರ ಹರೆಯದ ಆರೋಪಿ ಇಬ್ರಾಹಿಂ ಸೋಲಂಗಿ ಪೊಲೀಸ್ ವಶದಲ್ಲಿದ್ದು ಕೊಲೆ ಆರೋಪದ ವಿಚಾರಣೆಯನ್ನು ಎದುರಿಸುತ್ತಿದ್ದಾನೆ ಎಂದು ಖೈರ್‌ಪುರ್ ವಿಭಾಗದ ಪೊಲೀಸ್ ಮುಖ್ಯಸ್ಥ ಪೀರ್ ಮೊಹಮ್ಮದ್ ಶಾ ಹೇಳಿದ್ದಾರೆ.

ದೇಶದಲ್ಲಿ ಕುಟುಂಬ ಗೌರವ, ಪೂರ್ವಾಗ್ರಹ, ದಾಂಪತ್ಯ ದ್ರೋಹಗಳ ನೆಪದಲ್ಲಿ ಪ್ರತಿ ವರ್ಷ ಅನೇಕ ಮಹಿಳೆಯರನ್ನು ಪುರುಷ ಸಂಬಂಧಿಗಳು ಹತ್ಯೆ ಮಾಡಿದ ಪ್ರಕರಣಗಳು ವರದಿಯಾಗಿವೆ ಎಂದು ಮಾನವ ಹಕ್ಕುಗಳ ಆಯೋಗ ಕಟುವಾಗಿ ಟೀಕಿಸಿದೆ.

ಅಗಸ್ಟ್ ತಿಂಗಳಲ್ಲಿ ಶತಮಾನಗಳಿಂದ ಬಂದ ಸಂಪ್ರದಾಯವನ್ನು ಮುರಿದು ತಮ್ಮ ವರನನ್ನು ತಾವೇ ಆರಿಸಿಕೊಳ್ಳಲು ಪ್ರಯತ್ನಿಸಿದ ಆರೋಪದ ಮೇಲೆ ಐವರು ಮಹಿಳೆಯರನ್ನು ಸಜೀವವಾಗಿ ಸಮಾಧಿ ಮಾಡಲಾಗಿದೆ. ಇಂತಹ ಪ್ರಕರಣಗಳಿಗೆ ಅಂತ್ಯವಿಲ್ಲವೇ ಎಂದು ಸಂಸದರು ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ತಸ್ಲೀಮಾ ತಂದೆ ,ನನ್ನನ್ನು ಒಂದು ಕೋಣೆಯೊಳಗೆ ಕೂಡಿ ಹಾಕಿ ಹೊರಗಿನಿಂದ ಬೀಗ ಹಾಕಲಾಗಿತ್ತು. ಮಗಳಿಗೆ ನಾಯಿಗಳು ಚಿತ್ರಹಿಂಸೆ ನೀಡುವುದನ್ನು ನಾನು ಕಿಟಕಿಯಿಂದ ನೋಡುವಂತೆ ಒತ್ತಡ ಹೇರಲಾಗಿತ್ತು. ಮಗಳು ತಸ್ಲೀಮಾಳನ್ನು ನಾಯಿಗಳು ಚಿತ್ರಹಿಂಸೆ ನೀಡಿ ಕಚ್ಚಿ ಗಾಯಗೊಳಿಸಿದ ನಂತರ ಕೊನೆಗೆ ಮೂರ್ಛೆಹೋಗಿ ಬಿದ್ದವಳ ಮೇಲೆ ಗುಂಡು ಹಾರಿಸಿ ಕೊಲ್ಲಲಾಯಿತು ಎಂದು ಹೇಳಿಕೆ ನೀಡಿದ್ದಾರೆ.

ನನ್ನ ಹೆಸರಿನಲ್ಲಿರುವ ಭೂಮಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಆರೋಪಿ ಇಬ್ರಾಹಿಂ ಸೋಲಂಗಿ, ಮದುವೆಯಾದ ಐದು ತಿಂಗಳು ನಿರಂತರ ತಸ್ಲೀಮಾಳಿಗೆ ದೈಹಿಕ ಹಿಂಸೆ ನೀಡಿದ್ದಾನೆ ಎಂದು ತಸ್ಲೀಮಾ ತಂದೆ ಗುಲ್‌ಶರ್ ಸೋಲಂಗಿ ಆರೋಪಿಸಿದ್ದಾರೆ.

ಆರೋಪಿ ಕುಟುಂಬಗಳಿಂದ ಹತ್ಯೆ ಮಾಡುವ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಇನ್ನೊಬ್ಬ ಮಗಳೊಂದಿಗೆ ವಾಸಿಸುತ್ತಿದ್ದ ಮನೆಯನ್ನು ತ್ಯಜಿಸಿ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿರುವುದಾಗಿ ಮೃತಳ ತಂದೆ ಗುಲ್‌ಶರ್ ಸೋಲಂಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತಮ್ಮ ಮಗ ಇಬ್ರಾಹಿಂ ಸೋಲಂಗಿ ಪೊಲೀಸರ ಒತ್ತಡದ ಕಿರುಕುಳದಿಂದಾಗಿ ತಸ್ಲೀಮಾಳನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು,ನಾಯಿಗಳಿಂದ ಚಿತ್ರಹಿಂಸೆ ನೀಡುರುವ ಆರೋಪ ಸತ್ಯಕ್ಕೆ ದೂರವಾದದು ಎಂದು ಮೃತ ತಸ್ಲೀಮಾಳ ಮಾವ ಝಮೀರ್ ಹುಸೇನ್ ಸೋಲಂಗಿ ಹತ್ಯೆ ಆರೋಪವನ್ನು ತಳ್ಳಿಹಾಕಿದ್ದಾರೆ.

ಭೂಮಿ ವರ್ಗಾವಣೆ ಮತ್ತು ನಾಯಿಗಳಿಂದ ಮೃತಳಿಗೆ ಚಿತ್ರಹಿಂಸೆ ನೀಡಿರುವ ಕುರಿತಂತೆ ನಮ್ಮ ಬಳಿ ಸದ್ಯಕ್ಕೆ ಮಾಹಿತಿಯಿಲ್ಲ. ಆದರೆ ತನಿಖೆಯನ್ನು ಮುಂದುವರಿಸುವುದಾಗಿ ಪೊಲೀಸ್ ಮುಖ್ಯಸ್ಥರು ಭರವಸೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಿವಂಗತ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಸ್ಥಾಪಿಸಿದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನೇತೃತ್ವದ ಸರಕಾರ, ದೇಶದಲ್ಲಿ ಮಹಿಳೆಯರಿಗೆ ಹಕ್ಕುಗಳನ್ನು ನೀಡುವ ಕಾನೂನುಗಳನ್ನು ಹೆಚ್ಚಿಸುವುದಾಗಿ ಹೇಳಿಕೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದಲ್ಲಿ ಕ್ರೈಸ್ತರಿಗೂ ಬದುಕಲು ಬಿಡಿ: ಪೋಪ್
ಫಿಲಿಪೈನ್ಸ್: ಹಿಂಸಾಚಾರಕ್ಕೆ ಎಂಟು ಬಲಿ
ಒಬಾಮ ಹತ್ಯೆ ಸಂಚು-ಇಬ್ಬರ ಬಂಧನ
ಎಲ್‌ಟಿಟಿಇ ನಿಷೇಧ ಹಿಂತೆಗೆತಕ್ಕೆ ಪ್ರಭಾಕರನ್ ಆಗ್ರಹ
ಪಾಕ್-ಯುಎಸ್ ಕ್ಷಿಪಣಿ ದಾಳಿ:20 ಬಲಿ
ಸಿಂಗ್, ಹು ನಡುವೆ ಗಡಿ ಸಮಸ್ಯೆ ಮಾತುಕತೆ