ನ್ಯೂಯಾರ್ಕ್ : ಪರಮಾಣು ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವಂತೆ ವಿಶ್ವಸಂಸ್ಥೆ ಬೇಡಿಕೆ ಮಂಡಿಸುವುದು ಅನಧಿಕೃತವಾಗಿದೆ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಖಾಜಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಹೇಳಿದ್ದಾರೆ
ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯತ್ವ ಹೊಂದಿದ ಐದು ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ರಷ್ಯಾ,ಫ್ರಾನ್ಸ್ ಮತ್ತು ಚೀನಾ ರಾಷ್ಟ್ರಗಳು ಪರಮಾಣು ಕಾರ್ಯಕ್ರಮವನ್ನು ತ್ಯಜಿಸುವಂತೆ ಒತ್ತಡ ಹೇರುತ್ತಿವೆ ಎಂದು ಇರಾನ್ ರಾಯಭಾರಿ ಖಾಜಿ ಆರೋಪಿಸಿದ್ದಾರೆ.
ಇರಾನ್ ಪೂರ್ವಶರತ್ತುಗಳಿಲ್ಲದೇ ಸಮಸ್ಯೆ ಪರಿಹಾರಕ್ಕಾಗಿ ಸಂಧಾನ ಮಾತುಕತೆಗೆ ಸಿದ್ದವೆಂದು ಈಗಾಗಲೇ ಹಲವಾರು ಬಾರಿ ಸ್ಪಷ್ಟಪಡಿಸಿದೆ ಎಂದು ಖಾಜಿ ತಿಳಿಸಿದ್ದಾರೆ
ಆದರೆ ವಿಶ್ವಸಂಸ್ಥೆಯ ಭಧ್ರತಾ ಸಮಿತಿಯ ರಾಷ್ಟ್ರಗಳು ಸಂಧಾನಕ್ಕೆ ಮುಂಚಿತವಾಗಿ ಅಮಾನತನ್ನು ಪೂರ್ವಶರತ್ತಾಗಿ ಒತ್ತಾಯಿಸಿದಲ್ಲಿ ಶೂನ್ಯಸಂಬಂಧದತ್ತ ಸಾಗುತ್ತದೆ. ಇಂತಹ ಅನಧಿಕೃತ ಬೇಡಿಕೆಗಳಿಗೆ ನಾವು ಸಮ್ಮತಿಸುವುದಿಲ್ಲ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಖಾಜಿ ಸ್ಪಷ್ಟವಾಗಿ ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ತಿಳಿಸಿದ್ದಾರೆ. |