ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸುಡಾನ್: 5 ಚೀನಾ ಒತ್ತೆಯಾಳುಗಳ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುಡಾನ್: 5 ಚೀನಾ ಒತ್ತೆಯಾಳುಗಳ ಹತ್ಯೆ
ಮಧ್ಯ ಸುಡಾನ್‌ನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಒಂಭತ್ತು ಮಂದಿ ತೈಲ ಕಾರ್ಮಿಕರ ಪೈಕಿ ಐದು ಮಂದಿಯನ್ನು ಅಪಹರಣಕಾರರು ಹತ್ಯೆಗೈದಿದ್ದಾರೆಂದು ಸುಡಾನ್ ವಿದೇಶಾಂಗ ಸಚಿವಾಲಯ ಹೇಳಿದೆ.

ಐದು ಒತ್ತೆಯಾಳುಗಳು ಕೊಲೆಯಾಗಿದ್ದು, ಇತರ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆಂದು ಸಚಿವಾಲಯದ ವಕ್ತಾರರಾದ ಆಲಿ ಅಲ್-ಸಾದಿಗ್ ತಿಳಿಸಿದ್ದಾರೆ.

ದಾರ್‌ಫುರ್ ಬಂಡಾಯ ಸಂಘಟನೆ ನ್ಯಾಯ ಮತ್ತು ಸಮಾನತೆಯ ಚಳುವಳಿ (ಜೆಇಎಮ್‌)ಯ ಕಾರ್ಯಕರ್ತರಾಗಿರುವ ಅಪಹರಣಕಾರರು ಇನ್ನು ಇಬ್ಬರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಜೆಇಎಮ್‌ ಸಂಘಟನೆಯ ನೇರ ಸೂಚನೆಯೊಂದಿಗೆ ಈ ಕೃತ್ಯವನ್ನು ನಡೆಸಲಾಗಿದೆಯೆಂದು ಅವರು ತಿಳಿಸಿದರು.

ತೈಲ ಕಾರ್ಮಿಕರನ್ನು ಅಕ್ಟೋಬರ್ 19ರಂದು ಮಧ್ಯ ಸುಡಾನ್‌ನ ದಕ್ಷಿಣ ಕೊರ್‌ಡೊಫಾನ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಇದು ಕಳೆದೊಂದು ವರ್ಷದಿಂದ ಈ ಪ್ರದೇಶದಲ್ಲಿ ನಡೆಯುತ್ತಿರುವ ಇಂತಹ ಮ‌ೂರನೇ ಘಟನೆಯಾಗಿದೆ.

ಸ್ಥಳೀಯ ಆದಿವಾಸಿಗಳಿಗೆ ಅಪಹರಣಕಾರರಿಂದ ತೊಂದರೆಗೆ ಈಡಾಗುವ ಸಾಧ್ಯತೆ ಕಡಿಮೆಯಾಗಿದೆಯೆಂದು ರಾಜತಾಂತ್ರಿಕರು ಹೇಳಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಒಬ್ಬ ಸುಡಾನ್ ಡ್ರೈವರ್ ಸಹಿತ ನಾಲ್ಕು ಭಾರತೀಯ ತೈಲ ಕಾರ್ಮಿಕರನ್ನು ಅಪಹರಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವಸಂಸ್ಥೆ ನಿಲುವಿಗೆ ಇರಾನ್ ತರಾಟೆ
ಪಾಕ್: ತಂದೆಯ ಎದುರು ಮಗಳ ಹತ್ಯೆ
ಭಾರತದಲ್ಲಿ ಕ್ರೈಸ್ತರಿಗೂ ಬದುಕಲು ಬಿಡಿ: ಪೋಪ್
ಫಿಲಿಪೈನ್ಸ್: ಹಿಂಸಾಚಾರಕ್ಕೆ ಎಂಟು ಬಲಿ
ಒಬಾಮ ಹತ್ಯೆ ಸಂಚು-ಇಬ್ಬರ ಬಂಧನ
ಎಲ್‌ಟಿಟಿಇ ನಿಷೇಧ ಹಿಂತೆಗೆತಕ್ಕೆ ಪ್ರಭಾಕರನ್ ಆಗ್ರಹ