ಮರಣದಂಡನೆಗೆ ಗುರಿಯಾದ ಭಾರತೀಯ ಮೂಲದ ಸರಬ್‌ಜಿತ್ ಸಿಂಗ್‌ನನ್ನು ಲಾಹೋರ್ ಕಾರಾಗೃಹದಲ್ಲಿ ಮರಣದಂಡನೆ ನೀಡುವ ಕೈದಿಗಳ ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಸ್ಥಳಾಂತರಿಸಲಾಗಿದ್ದರಿಂದ ಆತನನ್ನು ಮರಣದಂಡನೆಯಿಂದ ಮುಕ್ತಿಗೊಳಿಸುವ ಆಶಾಭಾವನೆ ಮತ್ತೆ ಚಿಗುರೊಡೆದಿದೆ.
1990ರಲ್ಲಿ ನಡೆದ ನಾಲ್ಕು ಬಾಂಬ್ ಸ್ಫೋಟಗಳಲ್ಲಿ 14 ಮಂದಿ ಪಾಕ್ ನಾಗರಿಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಬ್‌ಜಿತ್‌ನನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗಿತ್ತು.ಇದೀಗ ಸರಬ್‌ಜಿತ್‌ನನ್ನು ಸಾಮಾನ್ಯ ಸೆಲ್‌ಗೆ ವರ್ಗಾಯಿಸಿರುವುದರಿಂದ ಗಲ್ಲಿಗೇರಿಸುವ ಸಾಧ್ಯತೆಗಳು ಕಡಿಮೆ ಆದರೆ ಇಲ್ಲಿಯವರೆಗೆ ಅಧಿಕಾರಿಗಳಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪಾಕ್‌ನ ಜಿಯೋ ಟಿ.ವಿ.ಚಾನೆಲ್ ವರದಿ ಮಾಡಿದೆ.
ಸರಬ್‌ಜಿತ್‌ನನ್ನು ಪಾಕಿಸ್ತಾನದ ಅಧಿಕಾರಿಗಳು ಮಂಜಿತ್‌ಸಿಂಗ್ ಎಂದು ಕರೆಯುತ್ತಿದ್ದು, ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ 1990ರಲ್ಲಿ ಬಂಧಿಸಲಾಗಿತ್ತು.
ಬಾಂಬ್ ದಾಳಿಯಲ್ಲಿ ಸರಬ್‌ಜಿತ್ ಪಾತ್ರವಿಲ್ಲವಾದ್ದರಿಂದ ಆತನನ್ನು ಬಿಡುಗಡೆಗೊಳಿಸಬೇಕು ಎಂದು ಸರಬ್‌ಜಿತ್ ಕುಟುಂಬ ಪಾಕ್‌ಗೆ ತೆರಳಿ ಅಧ್ಯಕ್ಷರಿಗೆ ಮನವಿ ಮಾಡಿತ್ತು.
|