ಅಮೆರಿಕ ಅಧ್ಯಕ್ಷಗಾದಿಗಾಗಿ ನಡೆಯುತ್ತಿರುವ ಅಂತಿಮ ಹಣಾಹಣಿಯಲ್ಲಿ ಇದೀಗ ಡೆಮೋಕ್ರಟ್ ಅಭ್ಯರ್ಥಿ ಬರಾಕ್ ಒಬಾಮ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮೆಕೈನ್ ಅವರಿಗಿಂತ 5ಅಂಕಗಳಿಗಿಂತ ಮುನ್ನಡೆ ಸಾಧಿಸಿರುವುದಾಗಿ ಬುಧವಾರ ಬಿಡುಗಡೆಗೊಂಡ ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ.
ಜಾನ್ ಮೆಕೈನ್‌ಗಿಂತ ಬರಾಕ್ ಒಬಾಮ ಅವರು 49ಶೇ.ಪಡೆದಿದ್ದರೆ, ಮೆಕೈನ್ ಶೇ.44ರಷ್ಟು ಮತದಾನ ಪಡೆದಿರುವುದಾಗಿ ಮೂರು ದಿನಗಳ ಕಾಲ ನಡೆದ ಮತದಾನದ ಸಮೀಕ್ಷೆಯನ್ನು ಉಲ್ಲೇಖಿಸಿ ಸ್ಪಾನ್-ಜೋಬೈ ಜಂಟಿಯಾಗಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯಲ್ಲಿ ಹೇಳಿದೆ.
ಒಬಾಮ ಅವರು ಸ್ಪರ್ಧೆಯಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿದ್ದು, 5ಅಂಕಗಳ ಮುನ್ನಡೆ ಸಾಧಿಸಿದ್ದು, ಚುನಾವಣಾ ಅಖಾಡ ಬಿರುಸಿನಿಂದ ಕೂಡಿರುವುದಾಗಿ ಸಮೀಕ್ಷೆ ತಿಳಿಸಿದೆ.
ಸುಮಾರು ಎರಡು ಶೇಕಡದಷ್ಟು ಮತದಾರರು ತಮ್ಮ ನಿರ್ಧಾರವನ್ನು ನಿರ್ಧರಿಸಿಲ್ಲ ಎಂದು ತಿಳಿಸಿರುವ ಸಮೀಕ್ಷೆ, ಕೊನೆಯ ಗಳಿಗೆಯಲ್ಲಿ ಆ ಮತಗಳು ಯಾರ ಪಾಲಿಗೆ ಒಲಿಯಲಿದೆ ಎಂದು ಕಾದುನೋಡಬೇಕಾಗಿದೆ ಎಂದು ಹೇಳಿದೆ. |