ದೇಶದ ಗಣ್ಯ ಮೌಲ್ವಿಗಳ ಅಡಳಿತ ಮಂಡಳಿ ಯೋಗದ ವಿರುದ್ಧ ಫತ್ವಾ ಹೊರಡಿಸುವ ಸಿದ್ದತೆಯಲ್ಲಿರುವುದರಿಂದ, ಮುಂಬರುವ ದಿನಗಳಲ್ಲಿ ಯೋಗಾಭ್ಯಾಸ ಕಾನೂನು ಬಾಹಿರವಾಗಲಿದೆ ಎಂದು ಮೂಲಗಳು ತಿಳಿಸಿವೆ
ಕೆಬಂಗಾಸನ್ ಇಸ್ಲಾಮಿಕ್ ಸ್ಟಡೀಸ್ ಸೆಂಟರ್ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಝಕಾರಿಯಾ ಸ್ತಾಪಾ,ಮುಸ್ಲಿಂ ಯುವಕ ,ಯುವತಿಯರಿಗೆ ನೀಡುವ ಯೋಗಾ ತರಬೇತಿಯನ್ನು ನಿಲ್ಲಿಸದಿದ್ದಲ್ಲಿ ಧಾರ್ಮಿಕ ನಂಬಿಕೆಗಳಿಂದ ದೂರವಾಗಿ ಅಡ್ಡದಾರಿ ಹಿಡಿಯುವ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಮಲೇಶ್ಯಾದ ನ್ಯಾಷನಲ್ ಫತ್ವಾ ಸಮಿತಿ ಯೋಗಾ ವಿರುದ್ಧ ಫತ್ವಾ ಹೊರಡಿಸಲು ಸಿದ್ದತೆ ನಡೆಸಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ನ್ಯಾಷನಲ್ ಫತ್ವಾ ಸಮಿತಿಯ ಅಧ್ಯಕ್ಷ ಅಬ್ದುಲ್ ಶುಕೊರ್ ಹುಸಿನ್ ಮತ್ತು ಮಲೇಶ್ಯಾದ ಇಸ್ಲಾಮಿಕ್ ಡೆವಲಪ್‌ಮೆಂಟ್ ವಿಭಾಗದ ಉಪ ಪ್ರಧಾನ ನಿರ್ದೇಶಕ ಒಥಮನ್ ಮುಸ್ತಫಾ ಯೋಗಾ ವಿರುದ್ಧ ಫತ್ವಾ ಆದೇಶ ಹೊರಡಿಸಲಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ. |