ಮಂಗಳವಾರದ ಪ್ರತ್ಯೇಕ ಘಟನೆಗಳಲ್ಲಿ ತಮಿಳು ಬಂಡುಕೋರರು(ಎಲ್‌ಟಿಟಿಇ) ಶ್ರೀಲಂಕಾ ರಾಜಧಾನಿಯ ವಿದ್ಯುತ್ ಸ್ಥಾವರ ಹಾಗೂ ಸೇನಾ ನೆಲೆಯ ಮೇಲೆ ವೈಮಾನಿಕ ದಾಳಿ ನಡೆಸಿರುವುದಾಗಿ ಮಿಲಿಟರಿ ವಕ್ತಾರರು ತಿಳಿಸಿದರು.
ಇದು ತಮಿಳು ಬಂಡುಕೋರರ ಎಂಟು ಮತ್ತು ಒಂಬತ್ತನೆಯ ದಾಳಿಯಾಗಿದೆ. ಸಿಂಗಲ್ ಎಂಜಿನ್ ಪ್ರೊಫೆಲರ್ ಚಾಲಿತ ವಿಮಾನಗಳ ಮೂಲಕ 2007ರ ಮಾರ್ಚ್‌ನಲ್ಲಿ ಪ್ರಥಮ ವಾಯು ದಾಳಿ ನಡೆಸಿತ್ತು.
ಮಂಗಳವಾರ ಎಲ್‌ಟಿಟಿಇ ತನ್ನ ಮೊದಲ ಆಕ್ರಮಣವನ್ನು ಉತ್ತರ ಕೊಲೊಂಬೊದಿಂದ 250ಕಿ.ಮೀ ದೂರದ ಮನ್ನಾರ್ ಜಿಲ್ಲೆಯಲ್ಲಿರುವ ತಲ್ಲಾಡಿ ಮಿಲಿಟರಿ ಕ್ಯಾಂಪ್‌ನ್ನು ಗುರಿಯಾಗಿಸಿಕೊಂಡು ನಡೆಸಿದೆ ಎಂದು ಮಿಲಿಟರಿ ವಕ್ತಾರರಾದ ಬ್ರಿಗೇಡಿಯರ್ ಉದಯ ನಾನಯಕ್ಕಾರ ತಿಳಿಸಿದರು.
ಇದಾದ ಸ್ವಲ್ಪದರಲ್ಲೆ ಕೊಲೊಂಬೊದ ದಕ್ಷಿಣಕ್ಕೆ ಭಾರತದ ಸಮುದ್ರದತ್ತ ಸಾಗುತ್ತಿದ್ದ ಅಜ್ಞಾತ ವಿಮಾನವನ್ನು ರಾಡಾರ್ ವಶಪಡಿಸಿಕೊಂಡಿತು. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆ ನಿಲ್ಲಿಸಿದ ಕಾರಣ ನಗರವಿಡೀ ಕತ್ತಲಲ್ಲಿ ಮುಳುಗಿತ್ತು, ವೈಮಾನಿಕ ರಕ್ಷಣೆಯನ್ನು ನಿಯೋಜಿಸಲಾಗಿತ್ತು.
ಎಲ್‌ಟಿಟಿಇಯ ಇನ್ನೊಂದು ಲಘು ವಿಮಾನವು ಕೊಲಂಬೋಗೆ ರಾತ್ರಿ ಸಮಯ 11.30ರ ವೇಳೆಗೆ ಬಂದಿದ್ದು, ಕೆಲಾನಿಟ್ಟಿಸ ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿತು. ಈ ಸಮಯದಲ್ಲಿ ಲಂಕಾ ಸೈನ್ಯದ ಗುಂಡು ನಿಗ್ರಹ ವಿಮಾನ ಕಾರ್ಯಪ್ರವೃತವಾಗಿದ್ದವು. ಕೆಲವು ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿಶಾಮಕ ದಳಗಳನ್ನು ಕಳುಹಿಸಲಾಗಿತ್ತು ಎಂದು ಅವರು ತಿಳಿಸಿದರು.
ದೀಪಗಳು ಆರಿದ ಸ್ಪಲ್ಪವೇ ಸಮಯದಲ್ಲಿ ಗುಂಡು ನಿರೋಧಕ ವಿಮಾನಗಳು ದಾಳಿ ನಡೆಸಿದ್ದು, ಇದನ್ನು ನೋಡಲು ಜನರು ಬೀದಿಗಳಲ್ಲಿ ಜಮಾಯಿಸಿದ್ದರು. ದಾಳಿಯನ್ನು ಒಂದೇ ವಿಮಾನದಲ್ಲಿ ನಡೆಸಲಾಗಿದೆಯೇ ಅಥವಾ ಎರಡು ವಿಮಾನಗಳು ಇದ್ದುವೇ ಎಂಬುದು ಸ್ಪಷ್ಟವಿಲ್ಲ ಎಂದು ನಾನಯಕ್ಕಾರ ಹೇಳಿದ್ದಾರೆ. |