ಏಷ್ಯಾ ಖಂಡದಲ್ಲಿ ಹೆಚ್ಚು ಅವಧಿಗೆ ಅಧಿಕಾರ ನಡೆಸಿದ ಖ್ಯಾತಿಯನ್ನು ಹೊಂದಿದ ಗಯೂಮ್ ಅವರನ್ನು ರಾಜಕೀಯ ಮಾಜಿ ಕೈದಿ ನಿಶಾದ್ , ಮಾಲ್ದೀವ್ಸ್‌ನಲ್ಲಿ ಪ್ರಥಮ ಬಾರಿಗೆ ನಡೆದ ಪ್ರಜಾಸತ್ತಾತ್ಮಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿಸುವ ಮೂಲಕ ಅಧ್ಯಕ್ಷ ಗಾದಿಗೆ ಏರಿದ್ದಾರೆ.
ಐತಿಹಾಸಿಕ ಚುನಾವಣೆಯ ಮತದಾನ ಎಣಿಕೆ ಕಾರ್ಯ ಇಂದು ಮುಕ್ತಾಯವಾಗಿದ್ದು, ಮೊಹಮ್ಮದ್ ಅನ್ನಿ ನಾಶಿದ್ ಶೇ. 54ರಷ್ಟು ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದು, ಹಾಲಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಶೇ. 46 ರಷ್ಟು ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಆಯೋಗ ಪ್ರಕಟಿಸಿದೆ.
71 ವರ್ಷ ವಯಸ್ಸಿನ ಗಯೂಮ್ 1978ರಿಂದ ಪ್ರವಾಸೋದ್ಯಮ ದ್ವೀಪ ರಾಷ್ಟ್ರವಾದ ಮಾಲ್ದೀವ್ಸ್‌ನಲ್ಲಿ ಅಧಿಕಾರ ನಡೆಸಿದ್ದು, ಕಳೆದ ವರ್ಷ ಭ್ರಷ್ಟಾಚಾರದ ಆರೋಪದ ಮೇಲೆ ನಾಶಿದ್‌ರನ್ನು ಜೈಲಿಗೆ ತಳ್ಳಿದ್ದರು.
ಮೂರು ವಾರಗಳ ಹಿಂದೆ ನಡೆದ ಚುನಾವಣೆಯಲ್ಲಿ ಗಯೂಮ್ ಜಯಗಳಿಸುವಲ್ಲಿ ವಿಫಲರಾಗಿದ್ದು, 41ರ ಹರೆಯದ ನಾಶಿದ್ ಅವರಿಗೆ ಜನತೆ ಬೆಂಬಲವನ್ನು ಸೂಚಿಸಿ ಚುನಾವಣೆಯಲ್ಲಿ ಬಹುಮತ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಲ್ದೀವ್ಸ್ ಅಧ್ಯಕ್ಷ ನಾಶಿದ್, ದೇಶದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ ಉತ್ತಮ ಆರೋಗ್ಯ, ಸಂಪರ್ಕ, ವಹಿವಾಟು ಖಾಸಗೀಕರಣ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದಾರೆ.
ಮಾಲ್ದೀವ್ಸ್ ದೇಶದಲ್ಲಿ 3 ಲಕ್ಷ ಉದಾರವಾದಿ ಸುನ್ನಿ ಮುಸ್ಲಿಂರಿದ್ದು ಎರಡು ಪಕ್ಷಗಳ ಚುನಾವಣೆಯನ್ನು ಇಲ್ಲಿಯವರೆಗೆ ಎದುರಿಸಿಲ್ಲ. ಪ್ರಥಮ ಬಾರಿಗೆ ಗಯೂಮ್ ಪಕ್ಷ ,ಹಾಗೂ ನಿಶಾದ್ ಪಕ್ಷಗಳ ಮಧ್ಯೆ ಮೂರು ವಾರಗಳ ಹಿಂದೆ ಚುನಾವಣೆ ನಡೆದು ಅಧ್ಯಕ್ಷ ನಿಶಾದ್‌ರನ್ನು ಜನತೆ ಆಯ್ಕೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |