ಪಾಕಿಸ್ತಾನ ಗಡಿಪ್ರದೇಶಗಳಲ್ಲಿ ಅಮೆರಿಕ ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ನಿಲ್ಲಿಸುವಂತೆ ಅಮೆರಿಕ ರಾಯಭಾರಿಗೆ ಆದೇಶಿಸಲಾಗಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಭಾಗಗಳ ಪ್ರದೇಶಗಳ ಮೇಲೆ ಅಮೆರಿಕ ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ಸರಕಾರ ತೀವ್ರವಾಗಿ ಖಂಡಿಸಿದ್ದು, ಕೂಡಲೇ ದಾಳಿಯನ್ನು ನಿಲ್ಲಿಸುವಂತೆ ಅಮೆರಿಕ ರಾಯಭಾರಿ ಕಚೇರಿಗೆ ಆದೇಶಿಸಲಾಗಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಗಡಿಯಲ್ಲಿರುವ ಉಗ್ರರ ನೆಲೆಗಳ ಮೇಲೆ ಅಮೆರಿಕ ಸೇನೆ ಕ್ಷಿಪಣಿ ದಾಳಿಯನ್ನು ನಡೆಸುತ್ತಿದೆ.ಪಾಕಿಸ್ತಾನ ಸೇನೆ ಉಗ್ರರ ಮೇಲೆ ಒತ್ತಡ ಹೇರುತ್ತಿಲ್ಲವೆಂದು ಅಮೆರಿಕ ಸೇನೆಯ ಕಮಾಂಡರ್‌ಗಳು ದೂರಿದ್ದಾರೆ.
ಅಮೆರಿಕ ಪಾಕ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವುದರಿಂದ ಸೌರ್ವಭೌಮತೆಗೆ ದಕ್ಕೆಯಾಗುತ್ತಿದ್ದು ಪ್ರತ್ಯೇಕತಾವಾದಿಗಳಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ಪಾಕ್ ಅಮೆರಿಕೆಗೆ ನೀಡಿದ ದೂರಿನಲ್ಲಿ ತಿಳಿಸಿದೆ. |