ಹಿಂದೂ ಮಹಾಸಾಗರಲ್ಲಿ 2004ರ ಡಿಸೆಂಬರ್ ತಿಂಗಳಲ್ಲಿ ಸಂಭವಿಸಿದ್ದ ಭೀಕರ ಸುನಾಮಿ ದುರಂತವು, ಕಳೆದ 600 ವರ್ಷಗಳಲ್ಲೇ ಸಂಭವಿಸಿದ ಅತೀ ದೊಡ್ಡ ಅನಾಹುತವಾಗಿದೆಯೆಂದು ಎರಡು ನೂತನ ಭೂಗರ್ಭ ಇಲಾಖೆಯ ಅಧ್ಯಯನ ವರದಿ ಹೇಳಿವೆ.
ನಾಲ್ಕು ವರ್ಷಗಳ ಹಿಂದೆ ಸಂಭವಿಸಿರುವ ಮಾರಣಾಂತಿಕ ಅಲೆಗಳನ್ನು ಎಬ್ಬಿಸಲು ಸಮುದ್ರದಾಳದಲ್ಲಿ ಭಾರೀ ಭೂಕಂಪನಕ್ಕೆ ಒತ್ತಡವುಂಟು ಮಾಡಿರುವುದನ್ನು ಈ ಸುದೀರ್ಘ ಅವಧಿಯು ವಿವರಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಈ ಅಧ್ಯಯನವು 'ನೇಚರ್' ಪತ್ರಿಕೆಯಲ್ಲಿ ಗುರುವಾರ ಪ್ರಕಟವಾಗಿದೆ. ಥೈಲಾಂಡ್ ಮತ್ತು ಉತ್ತರ ಸುಮಾತ್ರಗಳಲ್ಲಿ ದೊಡ್ಡ ದೊಡ್ದ ಗುಣಿಗಳನ್ನು ತೋಡಿ ಅವಶೇಷಗಳಡಿಯಿಂದ ಮಾದರಿಗಳನ್ನು ಹೊರತೆಗೆದ ಸಾಕ್ಷ್ಯಾಧಾರದಿಂದ 1300 ಮತ್ತು 1400 ಇಸವಿಯ ಅವಧಿಯಲ್ಲಿ ಭೀಕರ ಸುನಾಮಿ ಅಪ್ಪಳಿಸಿರಬಹುದು ಎಂದು ಅಂದಾಜಿಸಿರುವುದಾಗಿ ಎರಡು ಸಂಶೋಧನಾ ತಂಡಗಳು ಹೇಳಿವೆ. ಸುನಾಮಿ ಭಾದಿತ ಪ್ರದೇಶದಲ್ಲಿ ಸುನಾಮಿ ಅಲೆಗಳಿಂದಾಗಿ ಸಂಗ್ರಹಿತಗೊಂಡಿದ್ದ ಮರಳನ್ನು ಪತ್ತೆ ಹಚ್ಚಿರುವ ಸಂಶೋಧನಾ ತಂಡವು, ಕಾರ್ಬನ್ ಮಾದರಿಯ ಮೂಲಕ, ಜತೆಗಿದ್ದ ಗಿಡಗಳ ಅವಶೇಷದ ವಯಸ್ಸನ್ನು ಅಂದಾಜಿಸಲಾಗಿದೆ.
2004ರ ಡಿಸೆಂಬರ್‌ನಲ್ಲಿ ಸಂಭವಿಸಿದ ಸುನಾಮಿ ಅನಾಹುತದಲ್ಲಿ 14 ದೇಶದ ಹಲವಾರು ಜನರು ಸಾವನ್ನಪ್ಪಿದ್ದಾರೆ. ಉತ್ತರ ಸುಮಾತ್ರ ದ್ವೀಪಕ್ಕೆ 100 ಅಡಿ ಎತ್ತರದ ಅಲೆಗಳು ಅಪ್ಪಳಿಸಿ ಒಂದು ಮೈಲಿಕ್ಕಿಂತ ಹೆಚ್ಚು ಪ್ರದೇಶದ ತನಕ ಮರಳಿನ ನಿಕ್ಷೇಪವಾಗಿತ್ತೆಂದು ಸಂಶೋಧಕರು ಹೇಳಿದ್ದಾರೆ. ಥೈಲಾಂಡ್‌ನಲ್ಲಿ ಎರಡರಿಂದ ಎಂಟು ಇಂಚುಗಳಷ್ಟು ದಪ್ಪದಲ್ಲಿ ಮರಳಿನ ನಿಕ್ಷೇಪವಾಗಿತ್ತೆಂದು ಸಂಶೋಧನೆ ತಿಳಿಸಿದೆ. |