ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೋಮಾಲಿಯಾ: ಆತ್ಮಾಹುತಿ ಬಾಂಬ್ ದಾಳಿಗೆ 25 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಮಾಲಿಯಾ: ಆತ್ಮಾಹುತಿ ಬಾಂಬ್ ದಾಳಿಗೆ 25 ಬಲಿ
ಸೋಮಾಲಿಯಾ ವಿಚ್ಛಿನ್ನ ಪ್ರದೇಶವಾದ ಸೋಮಾಲಿ ಲ್ಯಾಂಡ್ ಮತ್ತು ಪುಂಟ್‌ಲ್ಯಾಂಡ್ ಪ್ರದೇಶದಲ್ಲಿ ಬುಧವಾರ ನಡೆಸಿದ ಆತ್ಮಾಹುತಿ ಕಾರು ಬಾಂಬ್ ದಾಳಿಯಲ್ಲಿ ಕನಿಷ್ಠ ಪಕ್ಷ 25 ಮಂದಿ ಹತರಾಗಿದ್ದು ಹೆಚ್ಚಿನ ಸಂಖ್ಯೆಯ ಜನರು ಗಾಯಾಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅರೆಸ್ವಾಯತ್ತದ ಈ ಎರಡು ಉತ್ತರದ ಪ್ರದೇಶಗಳಲ್ಲಿ ನಡೆದ ಸಂಘಟಿತವಾದ ಆತ್ಮಾಹುತಿ ಕಾರ್ ಬಾಂಬ್ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇದುವರೆಗೆ ಯಾವುದೇ ಸಂಘಟನೆಗಳು ಮುಂದೆ ಬಂದಿಲ್ಲ.

ಸೋಮಾಲಿ ಲ್ಯಾಂಡ್‌ ರಾಜಧಾನಿಯಾದ ಹರ್‌ಗೈಸಾದಲ್ಲಿರುವ ಅಧ್ಯಕ್ಷರ ಭವನ, ಇಥಿಯೋಪಿಯಾದ ರಾಜತಾಂತ್ರಿಕ ಆವರಣ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‌ಡಿಪಿ) ಕಾರ್ಯಾಲಯದಲ್ಲಿ ನಡೆಸಿದ ಪ್ರತ್ಯೇಕ ಆಕ್ರಮಣದಲ್ಲಿ 19 ಮಂದಿ ಸಾವಿಗೀಡಾಗಿದ್ದು 18 ಮಂದಿ ಗಾಯಾಗೊಂಡಿದ್ದಾರೆಂದು ಪೊಲೀಸ್ ಮ‌ೂಲಗಳು ತಿಳಿಸಿವೆ.

ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು ಬಾಂಬ್ ದಾಳಿಯ ಹಿಂದೆ ಭಯೋತ್ಪಾದನಾ ಸಂಘಟನೆಯ ಕೈವಾಡವಿರುವುದು ಖಚಿತ ಎಂದು ಸೊಮಾಲಿಲ್ಯಾಂಡ್ ಪೊಲೀಸ್ ಅಧಿಕಾರಿ ಅಬ್ದಿ ದಾಹಿರ್ ತಿಳಿಸಿದರು.ಈ ಬಾಂಬ್ ದಾಳಿಯಲ್ಲಿ ಅಧ್ಯಕ್ಷರ ಕಾರ್ಯದರ್ಶಿಯೂ ಕೂಡಾ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಸೋಮಾಲಿಲ್ಯಾಂಡ್ ರಾಷ್ಟ್ರಪತಿ ದಹಿರ್ ರಾಯಲೆ ಕಾಹಿನ್ ಸುರಕ್ಷಿತವಾಗಿದ್ದಾರೆ. ಆದರೆ ದಾಳಿಯ ವೇಳೆಯಲ್ಲಿ ಅವರು ಕಾರ್ಯಾಲಯದಲ್ಲಿ ಇದ್ದರೆ ಎಂಬ ಬಗ್ಗೆ ಇದುವರೆಗೆ ಸರಿಯಾದ ಮಾಹಿತಿ ಲಭಿಸಲಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಳೆದ 600 ವರ್ಷಗಳಲ್ಲೇ 2004ರ ಸುನಾಮಿ ಅತೀ ಭೀಕರ: ವರದಿ
ಈಜಿಪ್ಟ್ ಅಧ್ಯಕ್ಷರಲ್ಲಿ ಇಸ್ರೇಲ್ ಕ್ಷಮೆ ಯಾಚನೆ
ಪಾಕ್: ಅಪಹೃತ ಶಾಲಾ ಮಕ್ಕಳ ಬಿಡುಗಡೆ
ಆತ್ಮಾಹುತಿ ದಾಳಿ : 19 ಮಂದಿ ಸಾವು
ಅಮೆರಿಕ ಪಡೆ ಕ್ಷಿಪಣಿ ದಾಳಿ ನಿಲ್ಲಿಸಲಿ :ಪಾಕ್
ರಾಜಕೀಯ ಮಾಜಿ ಕೈದಿ ಮಾಲ್ದೀವ್ಸ್ ಅಧ್ಯಕ್ಷ