ವಾಯುವ್ಯ ಲಂಕಾದ ತೀರ ಪ್ರದೇಶದಲ್ಲಿ ತಮಿಳು ಬಂಡುಕೋರರು ನಡೆಸುತ್ತಿದ್ದ ಆಯುಧಗಳ ಕಳ್ಳಸಾಗಣಿಕೆ ಪ್ರದೇಶಕ್ಕೆ ಲಂಕಾ ಸೈನ್ಯವು ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆಯೆಂದು ರಕ್ಷಣಾ ಇಲಾಖೆ ತಿಳಿಸಿದೆ.
ಸಮುದ್ರ ಪ್ರದೇಶದ ನಾಚ್ಚಿಕುಡ ಗ್ರಾಮದ ಎಲ್ಲಾ ಭಾಗಗಳನ್ನು ಸೈನ್ಯವು ವಶಪಡಿಸಿಕೊಂಡಿದೆಯೆಂದು ಸಚಿವಾಲಯವು ಹೇಳಿದೆ.
ನಾಚ್ಚಿಕುಡ ಗ್ರಾಮ ಪ್ರದೇಶವನ್ನು ಆಯುಧಗಳ ಕೇಂದ್ರಸ್ಛಾನವನ್ನಾಗಿ ಪರಿವರ್ತಿಸಿದ ತಮಿಳು ಬಂಡುಕೋರರು ಅಲ್ಲಿಂದ ಭೂಮಾರ್ಗಗಳ ಮೂಲಕ ಆಯುಧಗಳ ಕಳ್ಳ ಸಾಗಣಿಕೆಯನ್ನು ನಡೆಸಿತ್ತಿದೆಯೆಂದು ಮಿಲಿಟರಿ ತಿಳಿಸಿದೆ.
ಎಲ್‌ಟಿಟಿಯು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಇದುವರೆಗೆ ನೀಡಿಲ್ಲ. ಸಿಂಹಳೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಲಂಕಾದಲ್ಲಿ ಅಲ್ಪಸಂಖ್ಯಾತರಾದ ತಮಿಳರು 1972ರಿಂದ ಪ್ರತ್ಯೇಕವಾದ ರಾಜ್ಯದ ಬೇಡಿಕೆಯನ್ನಿಟ್ಟು ಹಿಂಸಾಚಾರದ ಹೋರಾಟವನ್ನು ನಡೆಸುತ್ತಿದೆ. ಹೋರಾಟದಲ್ಲಿ ಇದುವರೆಗೆ ಸಾವಿರಾರು ಮಂದಿ ಜೀವವನ್ನು ಕಳೆದುಕೊಂಡಿದ್ದಾರೆ.
ಎಲ್‌ಟಿಟಿಇ ಕಿಲಿನೊಚ್ಚಿ ನಗರ ಪ್ರದೇಶವನ್ನು ರಾಜಕೀಯ ಭದ್ರ ತಲಹದಿಯನ್ನಾಗಿ ಪರಿವರ್ತಿಸಲು ಕಳೆದ ಹತ್ತು ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಇದನ್ನು ತಡೆಯಲು ಲಂಕಾ ಸೈನ್ಯದಿಂದ ಕಾರ್ಯಾಚರಣೆಯು ಆರಂಭವಾಗಿದೆ. |