ಇಂಡೋನೇಷ್ಯಾದ ಆಗ್ನೇಯ ಪ್ರಾಂತ್ಯ ಪ್ರದೇಶವಾದ ಸುಲಾವೆಸಿಯ ಮರಳು ಗಣಿ ದುರಂತದಲ್ಲಿ 25ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗಣಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ನಡೆದ ಘಟನೆಯಲ್ಲಿ ಬೃಹತ್ ಪ್ರಮಾಣದ ಮರಳು ರಾಶಿಯು ಗಣಿಗೆ ಕುಸಿದು ಬಿದ್ದುದರಿಂದ ದುರಂತವು ಸಂಭವಿಸಿರುವುದಾಗಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನೋಡುತ್ತಿರುವ ಆರೋಗ್ಯ ಮಂತ್ರಿ ರುಸ್ತಮ್ ಪಕಾಯ ತಿಳಿಸಿದರು. ಈವರೆಗೆ ಗಣಿಯೊಳಗೆ ಸಿಲುಕಿರುವ ಐದು ಶವಗಳನ್ನು ಹೊರತೆಗೆಯಲಾಗಿದೆಯೆಂದು ಅವರು ಹೇಳಿದರು.
ಆಗ್ನೇಯ ಪ್ರಾಂತ್ಯ ಪ್ರದೇಶವಾದ ಸುಲಾವೆಸಿಯಲ್ಲಿ ಈ ದುರಂತವು ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗುತ್ತಿದೆಯೆಂದು ಅವರು ತಿಳಿಸಿದರು. |