ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಟಿಬೆಟ್: ಚೀನಾ ನೀತಿ ಪರಿಷ್ಕರಣೆಗೆ ಯುಎಸ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಬೆಟ್: ಚೀನಾ ನೀತಿ ಪರಿಷ್ಕರಣೆಗೆ ಯುಎಸ್ ಆಗ್ರಹ
ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಬೆಂಬಲಿತ ರಾಯಭಾರಿಗಳು ಹಾಗೂ ಚೀನಾ ಅಧಿಕಾರಿಗಳು ಬೀಜಿಂಗ್‌ನಲ್ಲಿ ಮಾತುಕತೆ ನಡೆಸುವ ಮುನ್ನ ಚೀನಾ ತನ್ನ ನೀತಿಗಳನ್ನು ಪರಿಷ್ಕರಿಸುವಂತೆ ಅಮೆರಿಕ ಒತ್ತಡ ಹೇರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಟಿಬೆಟ್ ಬಿಕ್ಕಟ್ಟು ಕುರಿತಂತೆ ಉದ್ರಿಕ್ತ ವಾತಾವರಣ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ದಲೈಲಾಮಾರ ಇಬ್ಬರು ರಾಯಭಾರಿಗಳು ಚೀನಾಗೆ ಚರ್ಚೆಗಾಗಿ ತೆರಳಲಿದ್ದು, ಅದಕ್ಕೂ ಮುನ್ನ ಚೀನಾ ತನ್ನ ನೀತಿಗಳನ್ನು ಪರಿಷ್ಕರಿಸುವುದು ಅಗತ್ಯವಾಗಿದೆ ಎಂದು ಅಮೆರಿಕ ವಕ್ತಾರ ಗೊರ್ಡಾನ್ ಡುಗ್ವಿಡ್ ಹೇಳಿದ್ದಾರೆ.

ಚೀನಾದ ನೀತಿಗಳಿಂದಾಗಿ ಟಿಬೆಟ್‌ ಪ್ರದೇಶದ ನಾಗರಿಕರಿಗೆ ಸಾಂಸ್ಕೃತಿಕ , ಧಾರ್ಮಿಕತೆ ಮತ್ತು ಬದುಕಿಗೆ ತೊಂದರೆಯಾಗಿ ಉದ್ರಿಕ್ತ ಸ್ಥಿತಿ ಎದುರಾಗುತ್ತಿರುವುದರಿಂದ ಟಿಬೆಟ್ ನಿಲುವುಗಳಲ್ಲಿ ಬದಲಾವಣೆ ಸೂಕ್ತ ಎಂದು ಗೊರ್ಡಾನ್ ಹೇಳಿದ್ದಾರೆ.

ಟಿಬೆಟ್ ಪ್ರದೇಶವನ್ನು ಪತ್ರಕರ್ತರಿಗೆ, ರಾಯಭಾರಿಗಳಿಗೆ ಮತ್ತು ಅಂತಾರಾಷ್ಟ್ರೀಯ ವೀಕ್ಷಕರಿಗೆ ಪ್ರವೇಶವನ್ನು ಮುಕ್ತವಾಗಿಸಬೇಕು ಎಂದು ಅಮೆರಿಕ ಚೀನಾಗೆ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.

ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಟಿಬೆಟ್‌ಗೆ ಅರ್ಥಪೂರ್ಣ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಲವಾರು ಮಂದಿ ಸಾವುನೋವು ಅನುಭವಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಲ್ಲಾ ಉಮರ್‌ ಜತೆ ರಾಜಿ ಇಲ್ಲ: ಅಮೆರಿಕ
ಇಂಡೋನೇಷ್ಯಾ: ಮರಳುಗಣಿ ಕುಸಿದು 25 ಸಾವು
ಎಲ್‌ಟಿಟಿಇ ಪ್ರಮುಖ ಕೇಂದ್ರ ಲಂಕಾ ವಶಕ್ಕೆ
ಬಾನ್ ಕಿ ಮ‌ೂನ್ ಭಾರತ ಪ್ರವಾಸ
ಪಾಕ್ ಭೂಕಂಪ: ಮೃತರ ಸಂಖ್ಯೆ 215ಕ್ಕೆ ಏರಿಕೆ
ಸೋಮಾಲಿಯಾ: ಆತ್ಮಾಹುತಿ ಬಾಂಬ್ ದಾಳಿಗೆ 25 ಬಲಿ