ಪಾಕಿಸ್ತಾನದ ಆಗ್ನೇಯ ಭಾಗದ ನಾರ್ಥ್‌ವೆಸ್ಟ್ ಫ್ರಂಟೈಯರ್ ಪ್ರಾಂತ್ಯದಲ್ಲಿ, ಪೊಲೀಸ್ ಮುಖ್ಯಸ್ಥರ ರಕ್ಷಣಾ ದಳದ ವಾಹನಗಳ ಮೇಲೆ ಆತ್ಮಾಹುತಿ ಬಾಂಬರ್ ದಳದ ಸದಸ್ಯ ದಾಳಿ ನಡೆಸಿದ ಪರಿಣಾಮ ಮೂವರು ಪೊಲೀಸರು ಅಧಿಕಾರಿಗಳು ಸೇರಿದಂತೆ ಐವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮರ್ಡಾನ್ ನಗರದಲ್ಲಿ ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಅಖ್ತರ್ ಅಲಿ ಶಾ ಅವರ ರಕ್ಷಣಾದಳದ ವಾಹನದ ಮೇಲೆ ದಾಳಿ ಆತ್ಮಾಹುತಿ ದಾಳಿ ನಡೆಸಿದಾಗ ಮೂವರು ಪೊಲೀಸರು ಅಧಿಕಾರಿಗಳು ಸೇರಿದಂತೆ ಐವರು ನಾಗರಿಕರು ಸಾವನ್ನಪ್ಪಿದ್ದು, ಸುಮಾರು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಮೇಯರ್ ಹಿಮಾಯತ್ ಅಲಿ ತಿಳಿಸಿದ್ದಾರೆ.
ಶಾ ಕರ್ತವ್ಯಕ್ಕಾಗಿ ತೆರಳುತ್ತಿದ್ದಾಗ ರಕ್ಷಣಾ ದಳದ ಮೇಲೆ ಆತ್ಮಾಹುತಿ ಬಾಂಬರ್ ದಳದ ಸದಸ್ಯ ವಾಹನವೊಂದರಿಂದ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ನಾರ್ಥ್‌ವೆಸ್ಟ್ ಫ್ರಂಟೈಯರ್ ಪ್ರಾಂತ್ಯದಲ್ಲಿ ಮರ್ಡಾನ್ ನಗರವಿದ್ದು, ತಾಲಿಬಾನ್ ಉಗ್ರರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿಗಳು ನಿರಂತರವಾಗಿ ನಡೆಯುತ್ತವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. |