ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಯುಸ್: ಭಾರತೀಯ ಮೂಲದ ಮೂವರ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಸ್: ಭಾರತೀಯ ಮೂಲದ ಮೂವರ ಹತ್ಯೆ
ಅಮೆರಿಕದಲ್ಲಿರುವ ಭಾರತ ಮ‌ೂಲದ ಕಾರ್ತಿಕ್ ರಂಜನ್‌ರ ಕುಟುಂಬವು ಆರ್ಥಿಕ ಬಿಕ್ಕಟ್ಟಿಗೆ ಬಲಿಯಾದ ಒಂದು ತಿಂಗಳೊಳಗೆ ಇನ್ನೊಂದು ಕುಟುಂಬವು ಇದಕ್ಕೆ ಬಲಿಯಾದ ಘಟನೆ ನಡೆದಿದೆ.

ಮಿಚಿಗನ್ ಸ್ಟೇಟ್ ನೊವಿ ಪಟ್ಟಣದ ಮನೆಯೊಂದರಲ್ಲಿ ಮ‌ೂವರನ್ನು ನಿರ್ದಯವಾಗಿ ಕೊಲೆಮಾಡಲಾಗಿದೆ. ಅಪರಾಧಿಯನ್ನು ಕಂಡುಹಿಡಿಯಲು ಪೊಲೀಸರು ತನಿಖೆ ಆರಂಭಿ ಸಿದ್ದಾರೆ. ಆರೋಪಿಯಾಗಿ 42 ವರ್ಷ ಪ್ರಾಯದ ಮನೆಯ ಯಜಮಾನನಿಗಾಗಿ ತೀವ್ರ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದರು.

ಸೋಮವಾರ ಸಂಜೆ ಜಯಲಕ್ಷ್ಮಿ ನೆರೂಸು(37), ಮಗಳಾದ ತೆಜಸ್ವಿ(14) ಮತ್ತು ಮಗನಾದ ಶಿವ(12)ನನ್ನು ಮನೆಯಲ್ಲಿ ನಿರ್ದಯವಾಗಿ ಹತ್ಯೆಗೈಯಲಾಗಿದೆ. ಸಂಬಂಧಿಕರು ನೀಡಿದ ದೂರಿನಿಂದಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರೆಂದು ನೊವಿ ಪೊಲೀಸ್ ಮುಖ್ಯಸ್ಥ ಡೇವಿಡ್ ಇ ಮೊಲ್ಲೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಿಟ್ರೊಟ್ ವಾರ್ತಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹತ್ಯೆಗೀಡಾದ ವ್ಯಕ್ತಿಗಳ ತಲೆ ಮತ್ತು ಕುತ್ತಿಗೆಗಳ ಮೇಲೆ ಗಾಯಾಗಳಿವೆಯೆಂದು ಪೊಲೀಸರು ತಿಳಿಸಿದರು.

ಈ ಮ‌ೂವರ ಕೊಲೆಯನ್ನು ಅತೀ ಕ್ರೂರವಾಗಿ ನಡೆಸಲಾಗಿದೆ. ಪೊಲೀಸರು ಹತ್ಯೆಗೀಡಾದ ಜಯಲಕ್ಷ್ಮಿಯ ಗಂಡನಾದ ಲಕ್ಷ್ಮಿನಿವಾಸ ರಾವ್ ನೆರೂಸು ಹತ್ಯೆಗೈದಿರುವುದಾಗಿ ಇಲಾಖೆ ಸಂಶಯ ವ್ಯಕ್ತಪಡಿಸಿದೆ.

ಹತ್ಯೆಗೀಡಾದ ಮನೆಯಲ್ಲಿ ವಾಸಿಸುವ ರಾವ್ ಈಗ ನಾಪತ್ತೆಯಾಗಿರುವುದು ಅವರ ಮೇಲಿನ ಸಂಶಯ ಹೆಚ್ಚಲು ಕಾರಣವೆನ್ನಲಾಗಿದೆ. ಆರೋಪಿ ರಾವ್ ಸಾಫ್ಟ್‌ವೇರ್ ಪ್ರೊಗ್ರಾಮರ್‌ನಲ್ಲಿದ್ದು, ಇದೀಗ ಕೆಲಸವಿಲ್ಲದೆ ಮನೆಯಲ್ಲಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆತ್ಮಾಹುತಿ ಬಾಂಬರ್‌ ದಾಳಿ: 8 ಮಂದಿ ಸಾವು
ಟಿಬೆಟ್: ಚೀನಾ ನೀತಿ ಪರಿಷ್ಕರಣೆಗೆ ಯುಎಸ್ ಆಗ್ರಹ
ಮುಲ್ಲಾ ಉಮರ್‌ ಜತೆ ರಾಜಿ ಇಲ್ಲ: ಅಮೆರಿಕ
ಇಂಡೋನೇಷ್ಯಾ: ಮರಳುಗಣಿ ಕುಸಿದು 25 ಸಾವು
ಎಲ್‌ಟಿಟಿಇ ಪ್ರಮುಖ ಕೇಂದ್ರ ಲಂಕಾ ವಶಕ್ಕೆ
ಬಾನ್ ಕಿ ಮ‌ೂನ್ ಭಾರತ ಪ್ರವಾಸ