ವಾಯುವ್ಯ ಪಾಕಿಸ್ಥಾನದ ಪೇಶಾವರ ನಗರದಲ್ಲಿ ಶುಕ್ರವಾರ ಅಪರಿಚಿತ ವ್ಯಕ್ತಿಗಳು ಅಫ್ಘಾನ್ ವಿತ್ತ ಮಂತ್ರಿಯ ಸಹೋದರನ ಅಪಹರಣ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪೇಶಾವರದ ಪೊಶ್ ಹಯಾತಬಾದ್ ಎಂಬ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಅಫ್ಘಾನಿಸ್ಥಾನದ ವಿತ್ತ ಮಂತ್ರಿಯಾದ ಅನ್ವರ್ ಉಲ್ ಹಕ್ ಅಹದಿಯ ಸಹೋದರನಾದ ಜಿಯಾ ಉಲ್ ಹಕ್ ಅಹದಿಯವರನ್ನು ಅಪರಿಚಿತ ವ್ಯಕ್ತಿಗಳು ಬಲವಂತದಿಂದ ಅಪಹರಿಸಿ ಕೊಂಡೊಯ್ಯಲಾಗಿದೆಯೆಂದು ಸಚಿವರ ಇನ್ನೊಬ್ಬ ಸಹೋದರನಾದ ಇಸ್ರಾರ್ ಉಲ್ ಹಕ್ ತಿಳಿಸಿದರು.
ಜಿಯಾ ಇಲ್ ಹಕ್‌ರನ್ನು ಬಲಾತ್ಕಾರವಾಗಿ ಕಾರಿಗೆ ಎಳೆದು ಹಾಕಿ ತಕ್ಷಣ ಅಪಹರಿಸಿ ಕೊಂಡೊಯ್ಯಲಾಗಿದೆಯೆಂದು ಅವರು ಹೇಳಿದರು.
ಪೊಲೀಸ್ ಠಾಣೆಯಲ್ಲಿ ಇದುವರೆಗೆ ಘಟನೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಅಫ್ಘಾನ್ ಸಚಿವ ಸೋದರನ ಅಪಹರಣ ನಡೆಸಿದರ ಹಿಂದೆ ಇದುವರೆಗೆ ಯಾವುದೇ ಸಂಘಟನೆಗಳು ಹೊಣೆಯನ್ನು ಹೊತ್ತಿಲ್ಲ.
ಪೇಶಾವರದಲ್ಲಿ ಸೆಪ್ಟೆಂಬರ್ 22ರಂದು ಪಾಕಿಸ್ಥಾನ ಅಫ್ಘಾನ್ ರಾಯಭಾರಿಯಾದ ಅಬ್ದುಲ್ ಖಾಲಿದ್ ಫರಾಹಿಯವರನ್ನು ಇದೇ ರೀತಿ ಬಂದೂಕುಧಾರಿ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದರು.
ಬಂದೂಕುಧಾರಿಗಳಾದ ಅಪಹರಣಕಾರರು ರಾಯಭಾರಿಯ ಕಾರು ಚಾಲಕನನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲಲಾಗಿದೆ. ಘಟನೆಯಲ್ಲಿ ಪಾಕಿಸ್ಥಾನದ ಅಫ್ಘಾನ್ ರಾಯಭಾರಿಯನ್ನು ಪತ್ತೆಹಚ್ಚಲು ಇದುವರೆಗೆ ಸಾಧ್ಯವಾಗಲಿಲ್ಲ. |