ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮ ಅವರಿಗೆ ವಿಶ್ವದ ಎಲ್ಲೆಡೆ ಜನ ಬೆಂಬಲ ವ್ಯಕ್ತವಾಗಿದೆ ಎಂದು ನೂತನ ಸಮೀಕ್ಷೆ ತಿಳಿಸಿದೆ.
ಆದರೆ ಒಬಾಮಾ ಅವರ ಚಿಂತನೆಗಳ ಬಗ್ಗೆ ಜಗತ್ತಿನ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಕೇವಲ ಅವರ ಯೌವನ, ಬಹುವರ್ಣಿಯ ಸಮಾಜ ಹಿನ್ನೆಲೆಯಂತಹ ವಿಷಯಗಳಷ್ಟೇ ದೊಡ್ಡದಾಗಿ ಬಿಂಬಿತವಾಗುತ್ತಿದೆ ಎಂಬ ಅಪಸ್ವರವೂ ಅವರ ವಿರುದ್ಧ ಕೇಳಿ ಬರುತ್ತಿದೆ.
ಜಗತ್ತಿನೆಲ್ಲೆಡೆ ಒಬಾಮಾ ಬೇಕೋ, ಮೆಕೇನ್ ಬೇಕೋ ಎಂಬ ವಿಷಯದಲ್ಲಿ ಮತ ಚಲಾವಣೆಗೊಂಡರೆ ಒಬಾಮಾಗೆ ಶೇ.42ರಷ್ಟು ಮತ ಬೀಳುತ್ತವೆ. ಮೆಕೇನ್‌ಗೆ ಕೇವಲ ಶೇ.12ರಷ್ಟು ಮತ ಬೀಳಬಹುದಷ್ಟೇ ಎಂದು ಬಿಬಿಸಿ ನಡೆಸಿದ ಸಮೀಕ್ಷೆ ತಿಳಿಸಿದೆ. 22ದೇಶಗಳಲ್ಲಿ 2,500ಜನರನ್ನು ಇದಕ್ಕಾಗಿ ಸಂದರ್ಶಿಸಲಾಗಿತ್ತು.
ಯುರೋಪ್ ಖಂಡದಲ್ಲೂ ಒಬಾಮಾ ಅವರು ಗರಿಷ್ಠ ಜನಬೆಂಬಲ ಪಡೆದಿದ್ದಾರೆ, ಜರ್ಮನಿ, ಫ್ರಾನ್ಸ್ ಮತ್ತು ನೆದರ್ಲೆಂಡ್‌ನ ಶೇ.80ಕ್ಕಿಂತ ಅಧಿಕ ಮಂದಿ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೆಕೇನ್‌ಗೆ ಪೋರ್ಚುಗಲ್‌ನಲ್ಲಿ ಮಾತ್ರ ಶೇ.35ರಷ್ಟು ಜನಬೆಂಬಲ ದೊರೆತಿದೆ.
ಪಾಲಿನ್‌ಗೆ ಅರ್ಹತೆ ಇಲ್ಲ: ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷೆ ಅಭ್ಯರ್ಥಿ ಪಾಲಿನ್ ಅವರು ಈ ಸ್ಥಾನಕ್ಕೆ ಏರುವ ಅರ್ಹತೆ ಗಳಿಸಿಲ್ಲ ಎಂದು ಹೆಚ್ಚಿನ ಮತದಾರರು ತೀರ್ಮಾನಿಸತೊಡಗಿದ್ದು, ಚುನಾವಣೆ ಸಮೀಪಿಸುತ್ತಿರುವಂತೆಯೇ ನಡೆದಿರುವ ಈ ಬೆಳವಣಿದೆ ಅವರಿಗೆ ತೀವ್ರ ಹಿನ್ನೆಡೆ ಉಂಟು ಮಾಡಿದೆ. |