ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಲ್ಲು ಶಿಕ್ಷೆ :ಇಂಡೋನೇಷ್ಯಾದಲ್ಲಿ ಬಿಗು ಭದ್ರತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಲ್ಲು ಶಿಕ್ಷೆ :ಇಂಡೋನೇಷ್ಯಾದಲ್ಲಿ ಬಿಗು ಭದ್ರತೆ
2002ರಲ್ಲಿ ನಡೆದ ಭೀಕರ ಬಾಲಿ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾದ ಮ‌ೂವರು ಇಸ್ಲಾಮಿಕ್ ಉಗ್ರಗಾಮಿಗಳಿಗೆ ಗಲ್ಲು ಶಿಕ್ಷೆಯನ್ನು ನೀಡಿದ್ದರ ಹಿನ್ನೆಲೆಯಲ್ಲಿ, ಭಯೋತ್ಪಾದನಾ ಸಂಘಟನೆಯ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ದೇಶದಾದ್ಯಂತ ಬಿಗು ಭದ್ರತೆಯನ್ನು ಏರ್ಪಡಿಸಲಾಗಿದೆಯೆಂದು ಇಂಡೋನೇಷ್ಯಾ ಪೊಲೀಸ್ ಅಧಿಕಾರಿಗಳು ತಿಳಿಸಿದರು. 2002ರಲ್ಲಿ ಬಾಲಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ 202 ಮಂದಿ ಸಾವನ್ನಪ್ಪಿದ್ದರು.

ಇಂಡೋನೇಷ್ಯಾದ ಪ್ರವಾಸಿ ತಾಣ,ಪ್ರಮುಖ ಪ್ರದೇಶಗಳು ಮತ್ತು ಪಶ್ಚಿಮ ತೈಲ ಕಂಪನಿಗಳಿಗೆ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದೆಯೆಂದು ರಾಷ್ಟ್ರೀಯ ಪೊಲೀಸ್ ವಕ್ತಾರರಾದ ಅಬೂಬಕ್ಕರ್ ನಟಪ್ರಾವಿರವರು ತಿಳಿಸಿದ್ದಾರೆ.

2002 ಅಕ್ಟೋಬರ್ 12ರಂದು ಬಾಲಿ ದ್ವೀಪದ ಎರಡು ಪ್ರಮುಖ ರಾತ್ರಿ ವಿಹಾರಧಾಮವನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ಸಂಚು ರೂಪಿಸಿರುವುದು ಮತ್ತು ದಾಳಿಗೆ ಸಹಕರಿಸಿರುವುದಕ್ಕಾಗಿ ಮ‌ೂವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆಯೆಂದು ಸರಕಾರವು ತಿಳಿಸಿದೆ.

ಆರೋಪಿಗಳಾದ ಇಮಾಮ್ ಸಾಮುದ್ರ, ಅಮ್‌ರೊಜಿ ನೂರ್‌ಹಾಸಿಮ್ ಮತ್ತು ಆಲಿ ಗ್ರೂಫ್ರಾನ್‌ರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದರಿಂದ ವಿಶ್ವದ ಅತೀ ದೊಡ್ಡ ಮುಸ್ಲಿಮ್ ರಾಷ್ಟ್ರವಾದ ಇಂಡೋನೇಷ್ಯಾದ ವಿರುದ್ಧ ಉಗ್ರಗಾಮಿ ದಾಳಿ ನಡೆಯಲು ಸಾಧ್ಯತೆಯಿರುವುದಾಗಿ ಪೊಲೀಸ್ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ಹೇಳಿದರು.

ಪೊಲೀಸ್ ಎಲ್ಲಾ ವಿಭಾಗದಲ್ಲೂ ಸರ್ವಸನ್ನದ್ಧವಾಗಿದೆ ಮತ್ತು ಭಯೋತ್ಪಾದನೆ ಕೃತ್ಯವನ್ನು ನಡೆಸಲು ಯೂವುದೇ ಅವಕಾಶವನ್ನು ನೀಡಲಾಗುವುದಿಲ್ಲವೆಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್‌ಗೆ ಭಾರತದಿಂದ ಬೆದರಿಕೆಯಿಲ್ಲ: ಒಬಾಮಾ
ಟಿಬೆಟ್: ಹಿಮಪಾತಕ್ಕೆ 9 ಬಲಿ
ಒಬಾಮಾಗೆ ವಿಶ್ವಾದ್ಯಂತ ಜನ ಬೆಂಬಲ
ಪಾಕ್ : ಅಫ್ಘಾನ್ ಸಚಿವ ಸೋದರನ ಅಪಹರಣ
ಯುಸ್: ಭಾರತೀಯ ಮೂಲದ ಮೂವರ ಹತ್ಯೆ
ಆತ್ಮಾಹುತಿ ಬಾಂಬರ್‌ ದಾಳಿ: 8 ಮಂದಿ ಸಾವು