ಪಾಕಿಸ್ತಾನ ಗಡಿಯಲ್ಲಿರುವ ಬುಡಕಟ್ಟು ಪ್ರದೇಶದಲ್ಲಿ ಪ್ಯಾರಾ ಮಿಲಿಟರಿ ಪಡೆಗಳ ಅಧಿಕಾರಿಗಳ ವಾಹನದ ಮೇಲೆ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದಾಗ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆಯ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದ ಗಡಿಯಲ್ಲಿರುವ ಆಲ್‌ಕೈದಾ ಮತ್ತು ತಾಲಿಬಾನ್ ಉಗ್ರರ ಭಧ್ರಕೋಟೆಯಾದ ಬುಡಕಟ್ಟು ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ದಕ್ಷಿಣ ವಜೀರಿಸ್ತಾನ್‌ನ ಝಲಾಯಿ ಫೋರ್ಟ್ ಚೆಕ್ ಪೋಸ್ಟ್‌ನ ಮುಖ್ಯ ದ್ವಾರದ ಬಳಿ ಪ್ಯಾರಾ ಮಿಲಿಟರಿ ವಾಹನಗಳು ಸಾಗುತ್ತಿರುವಾಗ ಆತ್ಮಾಹುತಿ ಬಾಂಬರ್ ದಾಳಿ ನಡೆದಿದೆ ಎಂದು ಮೇಜರ್ ಜನರಲ್ ಅಥರ್ ಅಬ್ಬಾಸ್ ಹೇಳಿದ್ದಾರೆ. |