ಡೆಮಾಕ್ರಟಿಕ್ ಅಭ್ಯರ್ಥಿ ಸೆನೆಟರ್ ಬರಾಕ್ ಒಬಾಮಾ ,ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನು ಮೂರು ದಿನಗಳು ಬಾಕಿವುಳಿದಿರುವಂತೆ, ರಿಪಬ್ಲಿಕನ್ ಅಭ್ಯರ್ಥಿ ಸೆನೆಟರ್ ಜಾನ್ ಮೆಕೇನ್ ಅವರಿಗಿಂತ ವಿವಿಧ ಜನಾಭಿಪ್ರಾಯ ಮತ ಸಂಗ್ರಹಗಳಲ್ಲಿ ಭಾರೀ ಮುನ್ನಡೆ ಸಾಧಿಸಿದ್ದಾರೆ.
ಶನಿವಾರದ ರಾಸ್‌ಮಸೆನ್ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಸ್ಥಿರವಾಗಿದ್ದು, ಸೆನೆಟ್ ಒಬಾಮಾ ಪರವಾಗಿ 51-46 ಮತಗಳನ್ನು ಗಳಿಸಿದ್ದಾರೆ.ಏತನ್ಮಧ್ಯೆ ಕಾಫೀ ಕಪ್ ಸಮೀಕ್ಷೆಯಲ್ಲಿ ಸೆನೆಟರ್ ಒಬಾಮಾ ತಮ್ಮ ಪ್ರತಿಸ್ಪರ್ಧಿ ಜಾನ್ ಮೆಕೇನ್ ಅವರಿಗಿಂತ ಶೇ.20ರಷ್ಟು ಭಾರೀ ಅಂತರದಲ್ಲಿ ಮುನ್ನಡೆ ಹೊಂದಿದ್ದಾರೆ.
ತಿಂಗಳ ಕಾಲ ನಡೆಯುವ ಸಮೀಕ್ಷೆಯು ಗ್ರಾಹಕರು ಡೆಮಾಕ್ರಟರಿಗ ಮತ ನೀಡುವುದಾದರೆ ನೀಲಿ ಕಪ್ ಮತ್ತು ರಿಪಬ್ಲಿಕನ್ನರಿಗೆ ಮತ ನೀಡುವುದಾದರೆ ಕೆಂಪು ಕಪ್ ಆಯ್ಕೆಮಾಡಿಕೊಳ್ಳುವ ಮೂಲಕ ಸಮೀಕ್ಷೆ ನಡೆಯಿತು. |