ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕ ದಾಳಿಯಿಂದ ಆಂತರಿಕ ಯುದ್ದ : ಷರೀಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ದಾಳಿಯಿಂದ ಆಂತರಿಕ ಯುದ್ದ : ಷರೀಫ್
ಪಾಕ್ ಪ್ರದೇಶದ ಮೇಲೆ ಅಮೆರಿಕದ ಕ್ಷಿಪಣಿ ದಾಳಿಗಳನ್ನು ತಕ್ಷಣವೇ ನಿಲ್ಲಿಸದಿದ್ದರೆ ರಾಷ್ಟ್ರದಲ್ಲಿ ಆಂತರಿಕ ಯುದ್ಧ ತಲೆದೋರಬಹುದು ಎಂದು ಮಾಜಿ ಪ್ರಧಾನಮಂತ್ರಿ ಮತ್ತು ಪ್ರತಿಪಕ್ಷ ಪಿಎಂಎಲ್-ಎನ್ ಮುಖಂಡ ನವಾಜ್ ಷರೀಫ್ ಶನಿವಾರ ಎಚ್ಚರಿಸಿದ್ದಾರೆ.

ಪಿಪಿಪಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಅವರು, ಪಾಕಿಸ್ತಾನಿ ನೆಲದ ಮೇಲೆ ಅಮೆರಿಕದ ಕ್ಷಿಪಣಿ ದಾಳಿಗಳಿಂದ ಇಸ್ಲಾಮಾಬಾದ್ ಮತ್ತು ಅಮೆರಿಕ ಸರ್ಕಾರವೆರಡೂ ಸಾರ್ವಜನಿಕ ಬೆಂಬಲವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.

ಪಾಕಿಸ್ತಾನಿ ನೆಲದ ಮೇಲೆ ಅಮೆರಿಕದ ದಾಳಿಯು ಮಾ‌ಮ‌ೂಲಿ ಪ್ರಕ್ರಿಯೆಯಾಗಿದ್ದು, ರಾಷ್ಟ್ರದ ಸಮಗ್ರತೆ ಮತ್ತು ಸ್ವಾಯತ್ತೆಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದ ಅವರು, ಇಂತಹ ದಾಳಿಗಳಲ್ಲಿ ಅಮಾಯಕ ಜನರ ಹತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಅಮೆರಿಕದ ಪೈಲಟ್‌ರಹಿತ ವಿಮಾನಗಳಿಂದ ಪಾಕಿಸ್ತಾನದ ಉತ್ತರ ಮತ್ತು ದಕ್ಷಿಣ ವಾಜಿರಿಸ್ತಾನ ಬುಡಕಟ್ಟು ಪ್ರದೇಶಗಳ ಮೇಲೆ ಕೈಗೊಂಡ ಕ್ಷಿಪಣಿ ದಾಳಿಗಳಲ್ಲಿ 32 ನಾಗರಿಕರು ಅಸುನೀಗಿದ ಬಳಿಕ ಷರೀಫ್ ಪ್ರತಿಕ್ರಿಯೆ ಹೊರಬಿದ್ದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ: ಬರಾಕ್‌ಗೆ ಭಾರೀ ಮುನ್ನಡೆ
ಪಾಕ್ : ಆತ್ಮಾಹುತಿ ದಾಳಿಗೆ 8 ಬಲಿ
ಸಧ್ಯಕ್ಕೆ ರಾಜಕೀಯ ಸೇರಲಾರೆ : ಮುಷರಫ್
ಗಲ್ಲು ಶಿಕ್ಷೆ :ಇಂಡೋನೇಷ್ಯಾದಲ್ಲಿ ಬಿಗು ಭದ್ರತೆ
ಪಾಕ್‌ಗೆ ಭಾರತದಿಂದ ಬೆದರಿಕೆಯಿಲ್ಲ: ಒಬಾಮಾ
ಟಿಬೆಟ್: ಹಿಮಪಾತಕ್ಕೆ 9 ಬಲಿ