ನೈರುತ್ಯ ಬ್ರೆಜಿಲ್‌ನಲ್ಲಿ ಸಂಭವಿಸಿದ ಸಣ್ಣ ವಿಮಾನ ಅಪಘಾತವೊಂದರಲ್ಲಿ 5ಮಂದಿ ಸಾವಿಗೀಡಾಗಿದ್ದಾರೆ.
ಪೆರುಗ್ವೆಯಿಂದ ಸುಮಾರು 250 ಕೀ.ಮೀ ದೂರಲ್ಲಿರುವ ಬ್ರೆಸಿಲ್‌ನ ರಾಜ್ಯವಾದ ಪರನಾ ಎಂಬ ಪ್ರದೇಶದಲ್ಲಿ ಭಾನುವಾರದಂದು ಅಪಘಾತವು ಸಂಭವಿಸಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯೊಬ್ಬರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಐದು ಪ್ರಯಾಣಿಕರು ಸಾವಿಗೀಡಾಗಿದ್ದಾರೆಂದು ಅವರು ಹೇಳಿದರು.
ಸನೊರದಿಂದ ಅರಪೊಂಗಸ್‌ಗೆ ವಿಮಾನಯಾನ ಕೈಗೊಂಡ ವೇಳೆ ಅಪಘಾತವು ಸಂಭವಿಸಿದೆ. ವಿಮಾನ ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
|