ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕ: ಅಧ್ಯಕ್ಷೀಯ ಮತದಾನಕ್ಕೆ ಕ್ಷಣಗಣನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ: ಅಧ್ಯಕ್ಷೀಯ ಮತದಾನಕ್ಕೆ ಕ್ಷಣಗಣನೆ
ಅಮೆರಿಕದಲ್ಲಿ ಮಂಗಳವಾರ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮೆಕೆನ್ ನಡುವೆ ತೀವ್ರ ಹಣಾಹಣಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ

ಜಾನ್ ಮೆಕೇನ್ ಈಗಿನ ಅಂತರವನ್ನು ಕಡಿಮೆ ಮಾಡಿಕೊಂಡು ಮೇಲಕ್ಕೆ ಬರಲು ಬಿರುಸಿನ ಯತ್ನ ನಡೆಸಿದ್ದರೆ, ಒಬಾಮಾ ಅವರು ತಮ್ಮ ಬೆಂಬಲಿಗರಿಗೆ ಮಿತಿಮೀರಿದ ಭರವಸೆಯಲ್ಲಿ ಮೈಮರೆಯುವುದು ಬೇಡ ಎಂದಿದ್ದಾರೆ.

ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿಯೂ ಒಬಾಮಾ ಮುಂದಿದ್ದಾರೆ. ಕೊಲಂಬಸ್‌ನಲ್ಲಿ 60ಸಾವಿರ ಮಂದಿ ಹಾಗೂ ಕ್ಲೀವ್ ಲ್ಯಾಂಡ್‌ನಲ್ಲಿ 80ಸಾವಿರ ಬೆಂಬಲಿಗರನ್ನು ಕುರಿತು ಮಾತನಾಡಿದ ಒಬಾಮಾ, ಈಗಲೇ ಚುನಾವಣೆ ಮುಗಿಯಿತು ಎಂದು ಭಾವಿಸಬೇಡಿ ಎಂದಿದ್ದಾರೆ.

2004ರಲ್ಲಿ ಬುಷ್ ಅವರು ಗೆದ್ದಿದ್ದ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈಗ ಅದೇ ಪಕ್ಷದ ಅಭ್ಯರ್ಥಿ ಮೆಕೇನ್ ಮುನ್ನಡೆ ಸಾಧಿಸಲು ಯತ್ನಿಸುತ್ತಿದ್ದಾರೆ.

ಈವರೆಗಿನ ಎಲ್ಲಾ ಸಮೀಕ್ಷೆಗಳಲ್ಲಿಯೂ ಒಬಾಮ ಅವರು ಮೆಕೇನ್ ಅವರಿಗಿಂತ ಮುಂದಿದ್ದಾರೆ. ಅಂತೂ ಮಂಗಳವಾರ ನಡೆಯಲಿರುವ ಮಹಾ ಮತದಾನದಲ್ಲಿ ವಿಶ್ವದ ದೊಡ್ಡಣ್ಣದ ಅಧ್ಯಕ್ಷ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂಬುದನ್ನು ಇಡೀ ವಿಶ್ವವೇ ಬೆರಗು ಕಣ್ಣಿನಿಂದ ನೋಡುತ್ತಿದೆ....
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ರೆಜಿಲ್ : ವಿಮಾನ ಅಪಘಾತಕ್ಕೆ 5 ಬಲಿ
ಲಂಕಾ : ಎಲ್‌ಟಿಟಿಇ ಬೆಂಬಲಿತ 93ಮಂದಿ ಸೆರೆ
ಅಮೆರಿಕ ದಾಳಿಯಿಂದ ಆಂತರಿಕ ಯುದ್ದ : ಷರೀಫ್
ಅಮೆರಿಕ: ಬರಾಕ್‌ಗೆ ಭಾರೀ ಮುನ್ನಡೆ
ಪಾಕ್ : ಆತ್ಮಾಹುತಿ ದಾಳಿಗೆ 8 ಬಲಿ
ಸಧ್ಯಕ್ಕೆ ರಾಜಕೀಯ ಸೇರಲಾರೆ : ಮುಷರಫ್