ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಗೆ ಜಯ: ಚಾವೇಜ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಗೆ ಜಯ: ಚಾವೇಜ್
ಮಂಗಳವಾರ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಪ್ಪು ಜನಾಂಗದ ಬರಾಕ್ ಒಬಾಮಾ ವಿಜಯಿಶಾಲಿಯಾಗುವ ಬಗ್ಗೆ ವಿಶ್ವಾಸವಿರುವುದಾಗಿ ಮತ್ತು ಇದರಿಂದ ಕ್ಯೂಬಾದೊಂದಿಗಿನ 46 ವರ್ಷಗಳ ಹಳೆಯ ವಾಣಿಜ್ಯ ಪ್ರತಿಬಂಧಕಾಜ್ಞೆಗೆ ತೆರೆಬೀಳಲಿದೆಯೆಂದು ವೆನೆಜುವೆಲಾ ಅಧ್ಯಕ್ಷ ಹ್ಯುಗೊ ಚಾವೇಜ್ ಭರವಸೆ ವ್ಯಕ್ತಪಡಿಸಿದ್ದಾರೆ.

ಕ್ರಾಂತಿಕಾರಿ ಅಥವಾ ಸಮಾಜವಾದಿ ಅಭ್ಯರ್ಥಿಯಾಗುವ ಬದಲು ಒಬಾಮಾ ಒಬ್ಬ ಕಪ್ಪು ಜನಾಂಗದ ವ್ಯಕ್ತಿಯಾಗಿ ಅಮೆರಿಕ ಅಧ್ಯಕ್ಷನಾಗುವುದರೊಂದಿಗೆ ಚರಿತ್ರೆಯಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ ಎಂದು ಭಾನುವಾರ ಆಗ್ನೇಯ ಬರಿನಾಸ್‌ನ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮುಂದಿನ ಅಮೆರಿಕ ಸರಕಾರವು ಕ್ಯೂಬಾದೊಂದಿಗಿನ ಕ್ರೂರವಾದ ವಾಣಿಜ್ಯ ಪ್ರತಿಬಂಧಕಾಜ್ಞೆಗೆ ತೆರೆ ಎಳೆಯಲಿದೆಯೆಂಬ ವಿಶ್ವಾಸ ತನಗಿದೆಯೆಂದು ಅವರು ಹೇಳಿದರು.

ಆಫ್ರಿಕಾ ಮ‌ೂಲದ ಅಮೆರಿಕ ಪ್ರಜೆಯೊಬ್ಬ ವೈಟ್ ಹೌಸ್‌ ಪ್ರವೇಶಿಸುವುದು ಸಣ್ಣ ವಿಷಯ ಅಲ್ಲ ಎಂದ ಚಾವೇಜ್ ಇರಾಕ್‌ನಲ್ಲಿರುವ ಅಮೆರಿಕ ಸೇನೆಯನ್ನು ಹಿಂತೆಗೆದುಕೊಳ್ಬೇಕೆಂದು ಮನವಿ ಮಾಡಿದ ಅವರು ವೆನೆಜುವೆಲಾ ಮತ್ತು ಇರಾನ್‌ ದೇಶಕ್ಕೆ ಒಡ್ಡುತ್ತಿರುವ ಅಪಾಯದ ಭೀತಿಯನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ: ಅಧ್ಯಕ್ಷೀಯ ಮತದಾನಕ್ಕೆ ಕ್ಷಣಗಣನೆ
ಬ್ರೆಜಿಲ್ : ವಿಮಾನ ಅಪಘಾತಕ್ಕೆ 5 ಬಲಿ
ಲಂಕಾ : ಎಲ್‌ಟಿಟಿಇ ಬೆಂಬಲಿತ 93ಮಂದಿ ಸೆರೆ
ಅಮೆರಿಕ ದಾಳಿಯಿಂದ ಆಂತರಿಕ ಯುದ್ದ : ಷರೀಫ್
ಅಮೆರಿಕ: ಬರಾಕ್‌ಗೆ ಭಾರೀ ಮುನ್ನಡೆ
ಪಾಕ್ : ಆತ್ಮಾಹುತಿ ದಾಳಿಗೆ 8 ಬಲಿ