ಅಫ್ಘಾನಿಸ್ಥಾನವನ್ನು ಇಸ್ಲಾಂ ರಾಜ್ಯವನ್ನಾಗಿ ಮಾಡಲು ಮತ್ತು 'ಷರಿಯಾ' ನಿಯಮವನ್ನು ಪುನಃ ಜಾರಿಗೆ ತರಲು ಅಮೆರಿಕಸೈನ್ಯದ ವಿರುದ್ಧ ಹೋರಾಡುವುದರೊಂದಿಗೆ ಅಮೆರಿಕದೊಂದಿಗಿನ ಎಲ್ಲಾ ಶಾಂತಿ ಮಾತುಕತೆಯನ್ನು ತಿರಸ್ಕರಿಸುವುದಾಗಿ ತಾಲಿಬಾನ್ ಉನ್ನತ ಸೈನ್ಯಧಿಕಾರಿಯೊಬ್ಬಾತನ ಹೇಳಿಕೆಯನ್ನು ಸೋಮವಾರ ಮಾಧ್ಯಮವೊಂದರ ವರದಿ ತಿಳಿಸಿದೆ.
ಇಸ್ಲಾಮ್‌ನ 'ಜಿಹಾದ್' ನಿಯಮವನ್ನು ಅಫ್ಘಾನಿಸ್ಥಾನದಲ್ಲಿ ಸ್ಥಾಪಿಸಲು 'ಜಿಹಾದ್' ಯುದ್ಧ ನಡೆಸುವುದಾಗಿ ತಿಳಿಸಿರುವ ಮುಲ್ಲಾ ಸಬೀರ್, ನೀತಿ ಬದಲಾವಣೆ ಅಥವಾ ಅಧಿಕಾರ ಅಥವಾ ಸಚಿವ ಸ್ಥಾನಗಳ ಹಂಚಿಕೆಗಾಗಿ ಇದೊಂದು ರಾಜಕೀಯ ಪ್ರೇರಿತ ಚಳವಳಿಯಲ್ಲವೆಂದು ಅವರು ಹೇಳಿದ್ದಾರೆ. ಮುಲ್ಲಾ ಸಬೀರ್ ನ್ಯೂಸ್‌ವೀಕ್‌ನೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ಅಫ್ಘಾನ್-ಪಾಕಿಸ್ತಾನ ಗಡಿ ಪ್ರದೇಶದ ವಸ್ತ್ರದ ಅಂಗಡಿಯೂಂದರಲ್ಲಿ ಸಬಿರ್ ಜತೆ ಸಂದರ್ಶನ ನಡೆಸಲಾಯಿತು ಎಂದು ಹೇಳಿರುವ ಪತ್ರಿಕೆಯು ಉನ್ನತ ಸ್ತರದ ನಾಯಕನಾಗಿರುವ ಸಬಿರ್ ತನ್ನ ಪೂರ್ಣ ಹೆಸರನ್ನು ಹೇಳಲು ನಿರಾಕರಿಸಿರುವುದಾಗಿ ತಿಳಿಸಿದೆ.
|