ನೈರುತ್ಯ ಚೀನಾದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮಣ್ಣು ಕುಸಿತಕ್ಕೆ ಕನಿಷ್ಠ ಪಕ್ಷ 22 ಮಂದಿ ಸಾವಿಗೀಡಾಗಿದ್ದು 45 ಮಂದಿ ನಾಪತ್ತೆಯಾಗಿದ್ದರೆಂದು ಮಾಧ್ಯಮವೊಂದರ ವರದಿ ತಿಳಿಸಿದೆ.
ಯುನಾನ್ ಪ್ರಾಂತ್ಯದ ಚೂಚಾಂಗ್ ಪಟ್ಟನದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹವುಂಟಾಗಿದ್ದು ಗುಡ್ಡೆ ಮಣ್ಣುಗಳ ಜರಿತದಿಂದ 1,000ರಷ್ಟು ಮನೆಗಳು ನಾಶವಾಗಿದೆಯೆಂದು ಕ್ಸಿನ್‌ಹುವಾ ವರದಿ ಹೇಳಿದೆ.
ಕಡಿದಾದ ಭೂ ಪ್ರದೇಶವಾದ ಯುನಾನ್‌ನ ರೈತರು ಇಳಿಜಾರು ಗ್ರಾಮಪ್ರದೇಶದಲ್ಲಿ ಸಣ್ಣ ಪ್ರಮಾಣದ ಗಣಿಗಾರಿಕೆಯೊಂದಿಗೆ ಜೀವನ ನಡೆಸುವುವವರಾಗಿದ್ದಾರೆ. ಪೂರ್ವ ಯುನಾನ್ ಪ್ರಾಂತ್ಯದ ಗ್ವಾಂಗ್‌ಸಿಯ ಪಿಂಗಾವೊ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಉಂಟಾದ ಪ್ರವಾಹಕ್ಕೆ 8 ಮಂದಿ ಸಾವಿಗೀಡಾಗಿದ್ದಾರೆ.
ಯುನಾನ್ ಮತ್ತು ಗ್ವಾಂನ್‌ಸಿಯ ನೆರೆಯ ಪ್ರದೇಶವಾದ ವಿಯೆಟ್ನಾಂನ ಉತ್ತರ ಮತ್ತು ಮಧ್ಯ ಭಾಗದಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 20 ಮಂದಿ ಸಾವಿಗೀಡಾಗಿದ್ದಾರೆ. |