ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮ ಭವಿಷ್ಯ ಇಂದು ನಿರ್ಧಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮ ಭವಿಷ್ಯ ಇಂದು ನಿರ್ಧಾರ
PTI
ಸುಮಾರು 20ತಿಂಗಳ ಕಾಲ ನಡೆದ ಸಾರ್ವಜನಿಕ ಸಭೆ, ಭಾಷಣ,ಚರ್ಚೆ,ಪ್ರಚಾರಗಳ ನಂತರ ಇದೀಗ ಅಮೆರಿಕದ ಮತದಾರರು ಮಂಗಳವಾರ ತಮ್ಮ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತಗಟ್ಟೆಗೆ ತೆರಳುವ ಮೂಲಕ ಒಬಾಮಾ ಮತ್ತು ಮೆಕೇನ್ ಹಣೆಬರಹ ನಿರ್ಧಾರವಾಗಲಿದೆ.

ಆಫ್ರಿಕಾ ಕಪ್ಪು ಜನಾಂಗಕ್ಕೆ ಸೇರಿದ ಬರಾಕ್ ಒಬಾಮ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವವಾದಿ ದೇಶವಾದ ಅಮೆರಿಕದ ಇತಿಹಾಸದಲ್ಲಿ ನೂತನ ಅಧ್ಯಾಯವೊಂದು ಪ್ರಾರಂಭವಾಗಲಿದೆ.

ವಾಲ್ ಸ್ಟ್ರೀಟ್ ಜರ್ನಲ್ ಸೋಮವಾರ ಬಿಡುಗಡೆ ಮಾಡಿದ ಜನಾಭಿಪ್ರಾಯದ ಪ್ರಕಾರ ಒಬಾಮ ಅವರು ಮೆಕೇನ್‌ಗಿಂತ 8ಪಾಯಿಂಟ್ ಮುನ್ನಡೆ ಸಾಧಿಸಿದ್ದಾರೆ.

ಕಳೆದ ವಾರ 10ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದ್ದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಬ್ಬರೂ ಎದುರಾಳಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಹೋರಾಟದಿಂದಾಗಿ ಅಂತರ ಕಡಿಮೆಯಾಗಿತ್ತು.

ಒಬಾಮಗೆ ಬಿಳಿಯರ ಬೆಂಬಲ: ಅಮೆರಿಕದ ಪಟ್ಟಣ ಪ್ರದೇಶಗಳ ಮತದಾರರು, ಯೂರೋಪ್ ಮೂಲದ ಮತದಾರರು, ಬಿಳಿ ಚರ್ಮದ ಕ್ಯಾಥೋಲಿಕ್‌ರು ಹಾಗೂ ಸ್ವತಂತ್ರ ಮನೋಭಾವದವರು ಸಹ ಒಬಾಮ ಅವರನ್ನು ಬೆಂಬಲಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟ, ಜನಪ್ರಿಯತೆ ಕಳೆದುಕೊಂಡ ಬುಷ್ ಆಡಳಿತ ಒಬಾಮಗೆ ಪರೋಕ್ಷ ನೆರವು ನೀಡಿದಂತಿದೆ.

ಆದರೆ ವಿದೇಶಾಂಗ ನೀತಿಯ ತಜ್ಞ, ಸೇನೆಯಲ್ಲಿ ಸೇವೆ ಸಲ್ಲಿಸಿದ ಅನುಭವ, ತಮ್ಮದೇ ಪಕ್ಷದ ನಿರ್ಧಾರಗಳನ್ನು ಸೆನೆಟ್‌ನಲ್ಲಿ ಪ್ರಶ್ನಿಸುವ ಛಾತಿ ಉಳ್ಳುವರು ಎಂಬ ಖ್ಯಾತಿ ಮೆಕೇನ್‌ಗೆ ಇದೆ. ಆದರೆ 2004ರ ಚುನಾವಣೆಗೂ ಮುನ್ನ ಜಾರ್ಜ್ ಬುಷ್ ಪಡೆದಿದ್ದ ಹಲವು ಗುಂಪುಗಳ ಬೆಂಬಲ ಮೆಕೇನ್ ಕಳೆದುಕೊಂಡಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮ ಅಥವಾ ಮೆಕೇನ್ ಯಾರೇ ಜಯಶಾಲಿಯಾದರು ಅವರು ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೀನಾ : ಭೂ ಕುಸಿತಕ್ಕೆ 22 ಸಾವು
ಅಫ್ಘಾನ್‌‌ನನ್ನು ಇಸ್ಲಾಂ ರಾಜ್ಯ ಮಾಡಿ: ತಾಲಿಬಾನ್
ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಗೆ ಜಯ: ಚಾವೇಜ್
ಅಮೆರಿಕ: ಅಧ್ಯಕ್ಷೀಯ ಮತದಾನಕ್ಕೆ ಕ್ಷಣಗಣನೆ
ಬ್ರೆಜಿಲ್ : ವಿಮಾನ ಅಪಘಾತಕ್ಕೆ 5 ಬಲಿ
ಲಂಕಾ : ಎಲ್‌ಟಿಟಿಇ ಬೆಂಬಲಿತ 93ಮಂದಿ ಸೆರೆ