ಮೆಕ್ಸಿಕೊ ನೊಗಲೆಸ್ ಗಡಿ ಪಟ್ಟಣದಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥ ಅಜ್ಞಾತರ ಗುಂಡೇಟಿಗೆ ಬಲಿಯಾಗಿದ್ದಾರೆ. ಅಲ್ಲದೇ, ಇಲ್ಲಿನ ತಿಜೂನ ತರಕಾರಿ ಗೋದಾಮಿನಲ್ಲಿ ಆರು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆಯೆಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸನೋರ ಪೊಲೀಸ್ ನಿರ್ದೇಶಕ ಜೌನ್ ಮ್ಯಾನುಯೆಲ್ ಪವೊನ್ ಫೆಲಿಕ್ಸ್ ಅವರು ಭಾನುವಾರ ರಾತ್ರಿಯಂದು ಅಂಗರಕ್ಷಕ ಮತ್ತು ಇತರ ಅಧಿಕಾರಿಗಳೊಂದಿಗೆ ಹೋಟೆಲ್ ವೊಂದರೊಳಗೆ ಪ್ರವೇಶಿಸುತ್ತಿದ್ದ ವೇಳೆ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತೆಂದು ತನಿಖಾ ವಿಭಾಗದ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಹತ್ಯೆಗೀಡಾದ ಪವೋನ್ ಅವರು ನಗರದಲ್ಲಿ ಪೊಲೀಸ್ ಕಾರ್ಯಾಚರಣೆಯ ನಿರ್ದೇಶನವನ್ನು ಆಗಷ್ಟೆ ಮುಗಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಮೆಕ್ಸಿಕೊದಾದ್ಯಂತ ನಡೆಯುತ್ತಿರುವ ಮಾದಕ ವಸ್ತುಗಳ ಹಿಂಸಾಚಾರದಿಂದಾಗಿ ಹಲವಾರು ಸೈನಿಕರು ಮತ್ತು ಪೊಲೀಸ್ ಅಧಿಕಾರಿಗಳು ಹತ್ಯೆಗೀಡಾಗಿದ್ದಾರೆ. |