ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಮರದಲ್ಲಿ ನ್ಯೂ ಹ್ಯಾಂಪ್‌ಶೈರ್‌ನ ಡಿಕ್ಸ್‌ವಿಲ್ಲೆನಾಚ್ ಪ್ರಾಂತ್ಯದಲ್ಲಿ ಡೆಮೋಕ್ರೆಟಿಕ್‌ನ ಬರಾಕ್ ಒಬಾಮ ಅವರು ಜಯ ಗಳಿಸುವ ಮೂಲಕ ತಮ್ಮ ಖಾತೆ ತೆರೆದಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾಣೆಯ ಮಹಾಮತದಾನ ಮಂಗಳವಾರ ಆರಂಭಗೊಂಡಿದ್ದು, ಇಂದು ಎಲ್ಲೆಡೆ ಅಧ್ಯಕ್ಷೀಯ ಆಯ್ಕೆಗಾಗಿ ಮತದಾನ ನಡೆಯುತ್ತಿದ್ದು, ಮೊದಲಿಗೆ ಬರಾಕ್ ಒಬಾಮ ಅವರು ಗೆಲುವಿನ ನಗು ಬೀರಿದ್ದಾರೆ.
ಡಿಕ್ಸ್‌ವಿಲ್ಲೆನಾಚ್‌ನಲ್ಲಿ ಒಬಾಮ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಜಾನ್ ಮೆಕೇನ್ ವಿರುದ್ಧ 15-6ರ ಅಂತರದಲ್ಲಿ ಸೋಲಿಸಿದರು.
ಅಲ್ಲದೇ ಈ ಅಖಾಡದಲ್ಲಿ ಪಕ್ಷೇತರ ಅಭ್ಯರ್ಥಿ ರಾಲ್ಫಾ ನಡೇರ್ ಕೂಡ ಇದ್ದಿದ್ದೂ, ಯಾವುದೇ ಮತವನ್ನು ಪಡೆಯಲು ಅವರು ಸಫಲರಾಗಿಲ್ಲ.
ಉತ್ತರದ ನ್ಯೂ ಹ್ಯಾಂಪ್‌ಶೈರ್ ನಗರ ಸಾಂಪ್ರದಾಯಿಕವಾದದ್ದು ಎಂಬ ಅಂಶವನ್ನು ಖಚಿತಪಡಿಸಿದೆ ಎಂದು ಕ್ಲರ್ಕ್ ರಿಕ್ ಇರ್ವಿನ್ ಒಬಾಮ ಜಯದ ಬಳಿಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. |