ಮಾತುಕತೆಗಳ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ವಿವಾದವನ್ನು ಬಗೆಹರಿಸಲು ಸಮರ್ಥವಾಗಿವೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವ ಸಂಸ್ಥೆಯ ಮಧ್ಯಪ್ರವೇಶವಿಲ್ಲದೆ ಕಾಶ್ಮೀರ ಬಿಕ್ಕಟ್ಟು ಬಗೆಹರಿಯಲಾರದು ಎಂಬ ಪಾಕಿಸ್ತಾನಿ ಬಾತ್ಮೀದಾರರೊಬ್ಬರ ವಾದವನ್ನು ಅವರು ತಿರಸ್ಕರಿಸಿದರು.
ಬಿಕ್ಕಟ್ಟು ಪರಿಹಾರಕ್ಕೆ ತಮ್ಮ ಸ್ಥಾನವನ್ನು ಬಳಸುವಿರೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಾನ್, ಬಿಕ್ಕಟ್ಟಿನ ಪರಿಹಾರಕ್ಕೆ ಉಭಯ ದೇಶಗಳು ವಿಶ್ವ ಸಂಸ್ಥೆಯ ಮಧ್ಯಪ್ರವೇಶದ ಬೇಡಿಕೆಯನ್ನು ಮುಂದಿಟ್ಟರೆ ಅದನ್ನು ಕಾರ್ಯಗತಗೊಳಿಸುವುದಾಗಿ ನುಡಿದರು.
ಎರಡೂ ದೇಶಗಳು ಒಮ್ಮತದ ಬೇಡಿಕೆಯನ್ನು ಮುಂದಿಟ್ಟರೆ ಅದನ್ನು ಕಾರ್ಯಾಗತಗೊಳಿಸುವುದಾಗಿ ಬಾನ್ ಕಿ ಮೂನ್ ನುಡಿದರು. ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು.
ಭಾರತದ ಮುಖಂಡರೊಂದಿಗಿನ ಸಮಾಲೋಚನೆಯ ವೇಳೆಯಲ್ಲಿ ಪಾಕಿಸ್ತಾನದೊಂದಿಗಿನ ಸಮಗ್ರ ಮಾತುಕತೆಯನ್ನು ಮುಂದುವರಿಸಲು ಬಾನ್ ಒತ್ತಾಯಿಸಿದರು. |