ಅಮೆರಿಕದ ಸಿಯಾಲ್‌ಕೋಟ್‌ನಲ್ಲಿ ಮತ್ತೊಬ್ಬ ಭಾರತೀಯ ಎಂಜಿನಿಯರ್‌ರನ್ನು ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಶವವನ್ನು ಕರ್ನಾಟಕ ಮೂಲದ ಗದಗದ ನಿವಾಸಿ ಅರ್ಪಣಾ ಎಂದು ಗುರುತಿಸಲಾಗಿದೆ. ಆಕೆ ಸಿಯಾಲ್‌ಕೋಟ್‌ನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಕುಟುಂಬದ ಮೂಲಗಳು ಹೇಳಿವೆ.
ಅರ್ಪಣಾ ಅವರ ತಂದೆ ಹೈದರಾಬಾದ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಶೋಧ ನಡೆಸುತ್ತಿದ್ದಾರೆ.
ಆದರೆ ಅರ್ಪಣಾ ಅವರನ್ನು ಯಾವ ಕಾರಣಕ್ಕಾಗಿ ಹತ್ಯೆಗೈಯಲಾಗಿದೆ ಎಂಬ ವಿವರ ಇನ್ನೂ ತಿಳಿದುಬಂದಿಲ್ಲ. ಇತ್ತೀಚೆಗೆ ಅಮೆರಿಕದಲ್ಲಿ ಭಾರತೀಯರ ಹತ್ಯೆ ಪ್ರಕರಣ ಹೆಚ್ಚುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. |