ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್: ಆತ್ಮಾಹುತಿ ದಾಳಿಗೆ ಸೈನಿಕ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್: ಆತ್ಮಾಹುತಿ ದಾಳಿಗೆ ಸೈನಿಕ ಬಲಿ
ವಾಯುವ್ಯ ಪಾಕಿಸ್ತಾನದ ಗ್ರಾಮ ಪಟ್ಟಣದ ಚೆಕ್ ಪೋಸ್ಟ್‌‌‌ವೊಂದಕ್ಕೆ ಮಂಗಳವಾರ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ ಓರ್ವ ಸೈನಿಕ ಹತನಾಗಿದ್ದು ಇತರ ಏಳು ಮಂದಿ ಗಾಯಗೊಂಡಿದ್ದಾರೆ.

ಪಾಕಿಸ್ತಾನದ ವಾಯುವ್ಯ ಗಡಿ ಪ್ರದೇಶವಾದ ಹೆಂಗೂ ಜಿಲ್ಲೆಯ ದೊಬಾ ಪಟ್ಟಣದಲ್ಲಿ ಸ್ಘೋಟಕ ವಸ್ತು ಸಹಿತ ವಾಹನವೊಂದರಲ್ಲಿ ಬಾಂಬ್ ದಾಳಿಯನ್ನು ನಡೆಸಲಾಗಿದೆ.

ಬಾಂಬ್ ಸ್ಘೋಟದಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ಪ್ರವೇಶಿಸುವ ಮಧ್ಯೆ ಒಬ್ಬ ಸೈನಿಕ ಮೃತಪಟ್ಟನೆಂದು ಸೈನ್ಯವು ತಿಳಿಸಿದೆ.

ಬಾಂಬ್ ದಾಳಿಯ ಹಿಂದೆ ಯಾವುದೇ ಸಂಘಟನೆಯು ಹೊಣೆ ಹೊತ್ತಿಲ್ಲ. ಬಾಂಬ್ ದಾಳಿಯಿಂದಾಗಿ ಪ್ರದೇಶಕ್ಕೆ ಬೆಂಕಿ ಹಚ್ಚಿದ ಕಾರಣ ಸ್ಥಳೀಯ ಮಾರುಕಟ್ಟೆಯನ್ನು ಮುಚ್ಚಲಾಯಿತು.

ದೊಬಾ ಪ್ರದೇಶದಲ್ಲಿ ಭಿನ್ನಪಂಥೀಯರ ಹಿಂಸಾಚಾರದ ಕಾರಣ ಇತ್ತೀಚಿಗಷ್ಟೆ ಚೇಕ್‌ಪೋಸ್ಟ್‌ನ್ನು ಸ್ಥಾಪಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕದಲ್ಲಿ ಗದಗ ಸಾಫ್ಟವೇರ್ ಹತ್ಯೆ
ಕಾಶ್ಮೀರಿ ಬಿಕ್ಕಟ್ಟು ಇತ್ಯರ್ಥಕ್ಕೆ ಭಾರತ-ಪಾಕ್ ಸಮರ್ಥ: ವಿಶ್ವಸಂಸ್ಥೆ
ಚುನಾವಣೆ: ಗೆಲುವಿನ ಖಾತೆ ತೆರೆದ ಒಬಾಮ
ಮೆಕ್ಸಿಕೊ: ಪೊಲೀಸ್ ಮುಖ್ಯಸ್ಥನ ಹತ್ಯೆ
ಅಧ್ಯಕ್ಷಗಾದಿ ಪೈಪೋಟಿಯಲ್ಲಿ 255 ಅಭ್ಯರ್ಥಿಗಳು !
ಕ್ಷಿಪಣಿ ದಾಳಿ ನಿಲ್ಲಿಸಲು ಅಮೆರಿಕಕ್ಕೆ ಪಾಕ್ ಎಚ್ಚರಿಕೆ