ವಿಶ್ವದ ಬೃಹತ್ ಪ್ರಜಾಪ್ರಭುತ್ವವಾದಿ ದೇಶ ಅಮೆರಿಕದ 44ನೇ ಅಧ್ಯಕ್ಷರಾಗಿ ಕಪ್ಪು ಜನಾಂಗದ ಬರಾಕ್ ಒಬಾಮ ಅವರು ಜಯಭೇರಿ ಬಾರಿಸುವ ಮೂಲಕ ಯುಎಸ್ ಇತಿಹಾಸದಲ್ಲೊಂದು ಹೊಸ ಮೈಲಿಗಲ್ಲು ನೆಟ್ಟಂತಾಗಿದೆ.ಅಧ್ಯಕ್ಷಗಾದಿಗಾಗಿ ಮಂಗಳವಾರ ಆರಂಭಗೊಂಡ ಮತದಾನ ಪ್ರಕ್ರಿಯೇ ಮುಕ್ತಾಯಗೊಂಡ ಬೆನ್ನಲ್ಲೇ, ಮತ ಎಣಿಕೆಯ ಕಾರ್ಯವೂ ಆರಂಭಗೊಳ್ಳುವ ಮೂಲಕ ಮೊತ್ತ ಮೊದಲ ಬಾರಿಗೆ ಬರಾಕ್ ಒಮಾಮ ಅವರು ವಾಷಿಂಗ್ಟನ್‌ನ ಡಿಚ್‌ವಿಲ್ಲಾ ತಮ್ಮ ಗೆಲುವಿನ ಖಾತೆ ತೆರೆದಿದ್ದರು.ವರ್ಮಂಟ್, ನ್ಯೂಜೆರ್ಸಿ, ವೆಸ್ಟ್ ವರ್ಜಿನಿಯಾ, ವಾಷಿಂಗ್ಟನ್ ಡಿಸಿ, ಹ್ಯಾಂಪ್‌ಶೈರ್‌ಗಳು ಒಬಾಮ ಮಡಿಲಿಗೆ ಸೇರುವ ಮೂಲಕ ಒಟ್ಟು 311ಸ್ಥಾನಗಳನ್ನು ಅವರು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಜಯಭೇರಿ ಗಳಿಸಿದ್ದಾರೆ.ಸಮೀಪದ ಪ್ರತಿಸ್ಪರ್ಧಿ, ರಿಪಬ್ಲಿಕನ್ ಪಕ್ಷದ ಜಾನ್ ಮೆಕೇನ್ ಅವರ ಪಾಲಿಗೆ ಕೆಂಟುಕಿ, ಇಂಡಿಯಾನಾ, ವರ್ಜಿನಿಯಾ, ಒಕ್ಲಾಮಾ, ದಕ್ಷಿಣ ಕರೋಲಿನಾ, ಜಾರ್ಜಿಯಾ ಸೇರುವ ಮೂಲಕ ಒಟ್ಟು 152ಸ್ಥಾನಗಳನ್ನು ಪಡೆದಿದ್ದಾರೆ.ಒಟ್ಟು 538 ಸದಸ್ಯ ಬಲ ಹೊಂದಿರುವ ಸೆನೆಟ್‌ನಲ್ಲಿ ಒಬಾಮ ಅವರ ಡೆಮೋಕ್ರೆಟಕ್ ಪಕ್ಷ 311 ಸ್ಥಾನ ಗಳಿಸುವ ಮೂಲಕ ಅಧ್ಯಕ್ಷಗಾದಿ ಏರುವುದು ಬಹುತೇಕ ಖಚಿತವಾಗಿದ್ದು, ಪ್ರತಿಸ್ಪರ್ಧಿ ಮೆಕೇನ್ ಅವರು 152ಸ್ಥಾನ ಪಡೆಯಲಷ್ಟೇ ಸಮರ್ಥರಾಗಿದ್ದಾರೆ.ಇದೀಗ ಡೆಮೋಕ್ರೆಟಿಕ್ ಪಕ್ಷದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಷ್ಟೇ ಒಬಾಮ ಪರ ಮತ ಚಲಾಯಿಸಲು ಬಾಕಿ ಉಳಿದಿದೆ.2004 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಒಹಿಯೋ ನಗರದಲ್ಲಿ ರಿಪಬ್ಲಿಕನ್ ಪಕ್ಷದ ಜಾರ್ಜ್ ಡಬ್ಲ್ಯು ಬುಷ್ ಅವರು ಗೆಲುವು ಸಾಧಿಸಿದ್ದರು ಆದರೆ ಈ ಬಾರಿ ಒಹಿಯೋ ಒಬಾಮ ಪಾಲಿಗೆ ಒಲಿಯಿತು.ಈ ಗೆಲುವಿನ ನಂತರ ಇದೊಂದು ಪವಾಡ ಎಂಬುದಾಗಿ ಒಬಾಮ ಅವರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಸಿಬಿಎಸ್ ವೆಬ್‌ಸೈಟ್‌ವೊಂದರ ವರದಿ ತಿಳಿಸಿದೆ.ಪ್ರಪ್ರಥಮ ಕಪ್ಪು ಜನಾಂಗದ ಅಧ್ಯಕ್ಷ: ಅಮೆರಿಕ ಇತಿಹಾಸದಲ್ಲಿಯೇ ಕಪ್ಪು ಜನಾಂಗದ ವ್ಯಕ್ತಿಯೊಬ್ಬ ಅಧ್ಯಕ್ಷ ಪಟ್ಟವನ್ನು ಅಲಂಕರಿಸುವ ಮೂಲಕ ನೂತನ ಇತಿಹಾಸವೇ ಸೃಷ್ಟಿಸಿದ್ದಾರೆ. ಈವರೆಗೂ ಬಿಳಿಯರ ಪ್ರಾಬಲ್ಯವನ್ನೇ ಹೊಂದಿರುವ ಅಮೆರಿಕ ಮೂಲತಃ ಸಾಮ್ರಾಜ್ಯಶಾಹಿ ಧೋರಣೆ ಹೊಂದುವ ಮೂಲಕ ಜನಾಂಗೀಯ ತಾರತಮ್ಯವೇ ಮುಖ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ಬರಾಕ್ ಒಬಾಮ ಅವರ ಗೆಲುವಿನ ಮೂಲಕ ಅಮೆರಿಕದ ಇತಿಹಾಸದಲ್ಲಿ ನೂತನ ಅಧ್ಯಾಯವೊಂದು ಆರಂಭವಾದಂತಾಗಿದೆ.ಒಬಾಮ: 47ರ ಹರೆಯದ ಬರಾಕ್ ಒಬಾಮ ಅವರು ಕೀನ್ಯಾ ಮೂಲದ ತಂದೆ ಹಾಗೂ ಕಾನ್‌ಸಾಸ್ ಮೂಲದ ಬಿಳಿ ವರ್ಣ ತಾಯಿಯ ಮಗನಾಗಿ ಹುಟ್ಟಿರುವ ಅವರ ಯಶೋಗಾಥೆ ಮಹತ್ತರವಾದದ್ದು.ಜನವರಿಯಲ್ಲಿ ಅಧಿಕಾರ ಸ್ವೀಕಾರ: ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದ ಜನರು ಈಗಾಗಲೇ ಒಬಾಮಗೆ ಸ್ಪಷ್ಟ ಬಹುಮತ ನೀಡಿದ್ದು, ಇನ್ನೂ ಒಂದು ಹಂತದ ಪ್ರಕ್ರಿಯೆ ಬಾಕಿ ಉಳಿದಿದ್ದು (ವೈಟ್ ಹೌಸ್‌ನಲ್ಲಿ ಸಂಸದರ, ಶಾಸಕರ ಮತದಾನ ಬಾಕಿ ಇದೆ), ಬರಾಕ್ ಅವರು ಜನವರಿ 20ರಂದು 44ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. |
|