ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕ ಜನತೆಗೆ ಸಂದ ಗೆಲುವು: ಒಬಾಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಜನತೆಗೆ ಸಂದ ಗೆಲುವು: ಒಬಾಮ
ಅಧ್ಯಕ್ಷೀಯ ಚುನಾವಣೆಯಲ್ಲಿನ ಈ ಐತಿಹಾಸಿಕ ಗೆಲುವು ಅಮೆರಿಕ ಜನತೆಗೆ ಸಂದ ಜಯ ಎಂಬುದಾಗಿ ಅಮೆರಿಕದ 44ನೆ ಅಧ್ಯಕ್ಷರಾಗಿ ಆಯ್ಕೆಗೊಂಡ ಬರಾಕ್ ಒಬಾಮ ಅವರು ಬಣ್ಣಿಸಿದ್ದಾರೆ.

ಬುಧವಾರ ಬೆಳಿಗ್ಗೆ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಘೋಷಣೆಯಾಗಿ, ಅಧ್ಯಕ್ಷರಾಗಿ ಆಯ್ಕೆಯಾದ ಒಬಾಮ ಅವರು ಚಿಕಾಗೋದ ಗ್ರ್ಯಾಂಟ್ ಪಾರ್ಕ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾವಪರಾವಶರಾಗಿ ಮಾತನಾಡಿದರು.

ನಾನು ಯಾವಾಗಲೂ ನಿಮ್ಮೊಂದಿಗೆ ಪ್ರಾಮಾಣಿಕ ವ್ಯಕ್ತಿಯಾಗಿಯೇ ಮುಂದುವರಿಯುವೆ, ಅಲ್ಲದೇ ಅಮೆರಿಕ ಜನತೆಯ ಧ್ವನಿಗೆ ದೊರೆತ ಗೆಲುವು ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಗೆಲುವಿನೊಂದಿಗೆ ಅಮೆರಿಕ ಜಾಗತಿಕವಾಗಿ ಸಂದೇಶವೊಂದನ್ನು ರವಾನಿಸಿದಂತಾಗಿದೆ. ನಾವು ಯಾವಾಗಲೂ ಒಗ್ಗಟ್ಟಿನಿಂದ ಇರುತ್ತೇವೆ ಎಂಬುದನ್ನು ಅಮೆರಿಕದ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಆ ನಿಟ್ಟಿನಲ್ಲಿ ಅಮೆರಿಕದಲ್ಲಿ ನೂತನ ಬದಲಾವಣೆಯ ಗಾಳಿ ಬೀಸಿದಂತಾಗಿದೆ ಎಂದು ತಿಳಿಸಿದ ಅವರು, ಈ ಗೆಲುವು ಇಡೀ ವಿಶ್ವಕ್ಕೆ ದೊರೆತ ಜಯವಾಗಿದೆ ಎಂದರು.

ಅಭಿನಂದನೆಗಳ ಮಹಾಪೂರ: ಅಮೆರಿಕ ಅಧ್ಯಕ್ಷಗಾದಿ ಏರಿದ ಬರಾಕ್ ಒಬಾಮ ಅವರನ್ನು ವಿಶ್ವದ ಅನೇಕ ಗಣ್ಯರು ಅಭಿನಂದಿಸಿದ್ದಾರೆ. ಇದೀಗ ಅಮೆರಿಕದಾದ್ಯಂತ ಬರಾಕ್ ಬೆಂಬಲಿಗರು, ಅಭಿಮಾನಿಗಳು ಸಂಭ್ರಮ, ವಿಜಯೋತ್ಸವವನ್ನು ಆಚರಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ವೀಡಿಯೋ ವೀಕ್ಷಿಸಿ
ಮತ್ತಷ್ಟು
ಅಧ್ಯಕ್ಷ ಪಟ್ಟ: ಒಬಾಮ ಜಯಭೇರಿ
ಪಾಕ್: ಆತ್ಮಾಹುತಿ ದಾಳಿಗೆ ಸೈನಿಕ ಬಲಿ
ಅಮೆರಿಕದಲ್ಲಿ ಗದಗ ಸಾಫ್ಟವೇರ್ ಎಂಜೀನಿಯರ್ ಹತ್ಯೆ
ಕಾಶ್ಮೀರಿ ಬಿಕ್ಕಟ್ಟು ಇತ್ಯರ್ಥಕ್ಕೆ ಭಾರತ-ಪಾಕ್ ಸಮರ್ಥ: ವಿಶ್ವಸಂಸ್ಥೆ
ಚುನಾವಣೆ: ಗೆಲುವಿನ ಖಾತೆ ತೆರೆದ ಒಬಾಮ
ಮೆಕ್ಸಿಕೊ: ಪೊಲೀಸ್ ಮುಖ್ಯಸ್ಥನ ಹತ್ಯೆ