ನೈರುತ್ಯ ಚೀನಾದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಪ್ರಬಲವಾದ ಭೂಕುಸಿತವುಂಟಾಗಿದ್ದು, ಇದೀಗ ಸಾವಿನ ಸಂಖ್ಯೆ 40ಕ್ಕೇ ಏರಿದೆಯೆಂದು ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಚೀನಾದ ಯುನಾನ್ ಪ್ರಾಂತ್ಯದ ಚುಚಾಂಗ್‌ನಲ್ಲಿ ಬುಧವಾರ ಐದು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆಯೆಂದು ಕ್ಸಿನ್‌ಹುವಾ ವರದಿ ತಿಳಿಸಿದೆ.
ಪರಿಹಾರ ಕಾರ್ಯವು ಭರದಿಂದ ಸಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆಗೆ ಸರಕಾರವು ತುರ್ತಾಗಿ ಸೈನ್ಯ, ಪೊಲೀಸ್ ಮತ್ತು ವೈದ್ಯಕೀಯ ಸೇವೆಯನ್ನು ಕಳುಹಿಸಲಾಗಿದ್ದು ಪೀಡಿತ ಜನರಿಗೆ ಪ್ರಥಮ ಅವಶ್ಯಕ ವಸ್ತುಗಳಾದ ಅಕ್ಕಿ, ಬಟ್ಟೆಗಳನ್ನು ರವಾನಿಸಲಾಗಿದೆಯೆಂದು ಮಾಧ್ಯಮವು ವರದಿ ಮಾಡಿದೆ. ಆದರೂ ಭೂಕುಸಿತಕ್ಕೆ ಈಗಲೂ 43 ಮಂದಿ ನಾಪತ್ತೆಯಾಗಿದ್ದು 10 ಮಂದಿ ಗಾಯಗೊಂಡಿದ್ದಾರೆ.
ಕಳೆದ ಹತ್ತು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಭೂಕುಸಿತವುಂಟಾಗಿದ್ದು ಗುಡ್ಡೆ ಮಣ್ಣುಗಳ ಜರಿತವುಂಟಾಗಿದೆ. ಮಂಗಳವಾರದಿಂದ ಆರಂಭವಾದ ರಕ್ಷಣಾ ಕಾರ್ಯಚರಣೆಯು ಇದುವರೆಗೆ 60,000 ಮಂದಿ ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಒಂಭತ್ತು ಪ್ರಧಾನ ನಗರಗಳಿಗೆ ತೊಂದರೆ ಉಂಟಾಗಿದ್ದು, ಒಂದು ಮಿಲಿಯನ್ ಜನರು ತೊಂದರೆ ಅನುಭವಿಸುವಂತಾಗಿದೆ. |