ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮೆಕ್ಸಿಕೊ : ವಿಮಾನ ದುರಂತದಲ್ಲಿ ಸಚಿವ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೆಕ್ಸಿಕೊ : ವಿಮಾನ ದುರಂತದಲ್ಲಿ ಸಚಿವ ಸಾವು
ಮೆಕ್ಸಿಕೊದ ಆಂತರಿಕ ಸಚಿವ ಹಾಗೂ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯ ಮುಖ್ಯಸ್ಥ ಮತ್ತು ಇತರ ಎಂಟು ಮಂದಿ ಮಂಗಳವಾರ ಸಂಜೆ ವೇಳೆಗೆ ಮಧ್ಯ ಮೆಕ್ಸಿಕೊ ಸಿಟಿಯಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ.

ಸಚಿವರಾದ ಜ್ವಾನ್ ಕ್ಯಾಮಿಲೊ ಮೌರಿನೊ ಮೆಕ್ಸಿಕೊ ಸಿಟಿಯ ಪ್ರದೇಶದಲ್ಲಿ ಸಣ್ಣ ವಿಮಾನವೊಂದರಲ್ಲಿ ಸಂಚರಿಸುತ್ತಿದ್ದ ವೇಳೆ ಅಪಘಾತವುಂಟಾಗಿದೆ. ವಿಮಾನ ನೆಲಕಪ್ಪಳಿಸಿ ಬೆಂಕಿ ಹಿಡಿದ ಪರಿಣಾಮ ಸ್ಥಳದಲ್ಲಿದ್ದ 20ರಷ್ಟು ಕಾರುಗಳು ಬೆಂಕಿಗಾಹುತಿಯಾಯಿತು.

ವಿಮಾನ ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಮೆಕ್ಸಿಕೊ ವಿಮಾನ ನಿಲ್ದಾಣದಲ್ಲಿ ಸಂಚಾರದ ನಿಯಂತ್ರಣವು ಕೆಟ್ಟು ಹೋದರಿಂದ ಅಪಘಾತ ಸಂಭವಿಸಿದೆಯೆಂದು ಪೈಲಟ್ ತಿಳಿಸಿದನು.

ಮೆಕ್ಸಿಕೊದಾದ್ಯಂತ ನಡೆಯುತ್ತಿರುವ ಮಾದಕ ವಸ್ತುಗಳ ಹಿಂಸಾಚಾರವನ್ನು ತಡೆಯಲು ಸರಕಾರದ ಚಳವಳಿಯನ್ನು ಮೌರಿನೊ ಮುನ್ನಡೆಸುತ್ತಿದ್ದರು. ಮೆಕ್ಸಿಕೊದಾದ್ಯಂತ ನಡೆಯುತ್ತಿರುವ ಮಾದಕ ವಸ್ತುಗಳ ವ್ಯಸನಕ್ಕೆ 4,000 ಮಂದಿ ಸಾವಿಗೀಡಾಗಿದ್ದಾರೆ.

ದೇಶದಾದ್ಯಂತ ಮಾದಕ ವಸ್ತುಗಳ ಮಾರಾಟ ತಡೆಯುವಲ್ಲಿ ಪ್ರಧಾನ ಪಾತ್ರವನ್ನು ಸಚಿವರು ವಹಿಸಿದ್ದರು.

ಸಚಿವರ ಸಹಿತ ಸುರಕ್ಷಾ ಶಿಫಾರಸುಗಾರನಾದ ಜೋಸ್ ಲೂಹಿಸ್ ಸ್ಯಾಂಟಿಯಾನೊ ವಾಸ್ಕೊಸಿಲೊಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಇಬ್ಬರ ಮರಣವು ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮೆಕ್ಸಿಕನ್ ಸರಕಾರಕ್ಕೆ ತುಂಬಲಾರದ ನಷ್ಟವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮ ಜಯಕ್ಕೆ ವಿಶ್ವಾದ್ಯಂತ ಅಭಿನಂದನೆ ಸುರಿಮಳೆ
ಅಮೆರಿಕ ಉಪಾಧ್ಯಕ್ಷ ಪಟ್ಟಕ್ಕೆ 'ಬಿಡೆನ್'
ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಶ್ವೇತಭವನಕ್ಕೆ ಕರಿಯ ಅಧ್ಯಕ್ಷ: ಹಾಲಿವುಡ್‌ನಿಂದ ವಾಸ್ತವಕ್ಕೆ
ಚೀನಾ ಭೂಕುಸಿತ: ಸಾವಿನ ಸಂಖ್ಯೆ 40
ಅಧ್ಯಕ್ಷ ಪಟ್ಟ: ಒಬಾಮ ಜಯಭೇರಿ