ವಿಶ್ವದ ದೊಡ್ಡಣ್ಣ ಎಂಬ ಹೆಗ್ಗಳಿಕೆ ಹೊಂದಿರುವ ಅಮೆರಿಕದ ಅಧ್ಯಕ್ಷಗಾದಿಯನ್ನು ಡೆಮೊಕ್ರಟ್‌ನ ಬರಾಕ್ ಒಬಾಮ ಆಯ್ಕೆಯಾಗುತ್ತಿರುವ ಬೆನ್ನಲ್ಲೇ, ಭಾರತದಲ್ಲಿ ಪರ-ವಿರೋಧದ ಚರ್ಚೆ ಆರಂಭಗೊಂಡಿದೆ. ಒಮಾಮ ಅವರ ಆಯ್ಕೆಯಿಂದ ಭಾರತಕ್ಕಾಗಲಿರುವ ಲಾಭ-ನಷ್ಟಗಳ ಬಗ್ಗೆ ಅವರು ಚುನಾವಣಾ ಸಂದರ್ಭದಲ್ಲಿ ಘೋಷಿಸಿರುವ ಅಂಶಗಳೊಂದಿಗೆ ಇಲ್ಲಿ ತುಲನೆ ಮಾಡಬಹುದಾಗಿದೆ.ಪರ: ಭಾರತದೊಂದಿಗೆ ಸ್ನೇಹ: ಚುನಾವಣೆಯಲ್ಲಿ ಆಯ್ಕೆಗೊಂಡಲ್ಲಿ ಭಾರತದೊಂದಿಗೆ ಮತ್ತಷ್ಟು ಸೌಹಾರ್ದ ಸಂಬಂಧ ಬೆಳೆಸುವುದಕ್ಕೆ ಪ್ರಾಮುಖ್ಯತೆ ನೀಡಲಾಗುವುದು.ಭಯೋತ್ಪಾದನೆ-ಪಾಕಿಸ್ತಾನ: ಭಯೋತ್ಪಾದನೆ ನಿರ್ಮೂಲನೆ ಅಲ್ಲದೇ ಪಾಕಿಸ್ತಾನದ ಗಡಿಭಾಗದಲ್ಲಿ ನೆಲೆಬಿಟ್ಟಿರುವ ಅಲ್ ಕೈದಾವನ್ನು ಮಟ್ಟ ಹಾಕುವ ಮೂಲಕ ಅಫ್ಘಾನಿಸ್ತಾನಕ್ಕೆ ಬಲ ತುಂಬುವುದು.ಇರಾಕ್ ಮತ್ತು ಇಸ್ಲಾಂ ರಾಷ್ಟ್ರ: ಅಧಿಕಾರ ವಹಿಸಿಕೊಂಡ 18ತಿಂಗಳೊಳಗೆ ಇರಾಕ್‌ನಿಂದ ಸೇನೆಯನ್ನು ವಾಪಸು ತೆಗೆದುಕೊಳ್ಳುವ ಭರವಸೆ.ಆರ್ಥಿಕ ನೀತಿಯಲ್ಲಿ ಸುಧಾರಣೆವಲಸೆ ನೀತಿ ಸುಧಾರಣೆ ಹಾಗೂ ಎಚ್1ಬಿ ವೀಸಾ ಕಾರ್ಯಕ್ರಮ ವಿರೋಧ:ಸಿಟಿಬಿಟಿ: ಪರಮಾಣು ನಿಶ್ಯಸ್ತ್ರೀಕರಣದ ಬಗ್ಗೆ ಒಮಾಮ ಗಟ್ಟಿ ನಿಲುವನ್ನು ಹೊಂದಿದ್ದು, ಸಿಟಿಬಿಟಿಗೆ ಸಹಿ ಹಾಕುವಂತೆ ಭಾರತಕ್ಕೆ ಒತ್ತಡ ಹೇರಬಹುದಾಗಿದೆ. ಹಾಗೂ ಈ ಸೂಕ್ಷ್ಮ ವಿಚಾರದ ಬಗ್ಗೆ ಮತ್ತೆ ಹೊಸ ಚರ್ಚೆಗೆ ವೇದಿಕೆ ಒದಗಿಸುವ ಸಾಧ್ಯತೆ.ಕಾಶ್ಮೀರ: ಕಾಶ್ಮೀರ ವಿವಾದವನ್ನು ಇತ್ಯರ್ಥ ಪಡಿಸುವುದಾಗಿ ಒಮಾಮ ಭರವಸೆ ನೀಡಿದ್ದರು. ಭಾರತ ಈ ವಿವಾದವನ್ನು ದ್ವಿಪಕ್ಷೀಯ ಮಾತುಕತೆಗೆ ಹೆಚ್ಚು ಒತ್ತು ನೀಡಿರುವುದರಿಂದ, ಭಾರತ-ಪಾಕ್ ಮೂರನೇ ದೇಶದ ಮಧ್ಯಸ್ಥಿಕೆಗೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದವು.ಹೊರಗುತ್ತಿಗೆ(ಔಟ್‌ಸೋರ್ಸಿಂಗ್): ಈಗಾಗಲೇ ಜಾಗತಿಕವಾಗಿ ಆರ್ಥಿಕ ಕುಸಿತ ಕಂಡಿದ್ದು, ಒಮಾಮ ಹೊರಗುತ್ತಿಗೆಯನ್ನು ಕಡಿತಗೊಳಿಸುವ ಮಾತನ್ನಾಡಿದ್ದಾರೆ, ಅಲ್ಲದೇ ಅಮೆರಿಕ ಕಂಪೆನಿಗಳು ಹೊಸ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. |
|