ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತಕ್ಕೆ ಹೊರಗುತ್ತಿಗೆ: ತೊಡಕಾದಾರೇ ಒಬಾಮ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಹೊರಗುತ್ತಿಗೆ: ತೊಡಕಾದಾರೇ ಒಬಾಮ?
ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತ-ಅಮೆರಿಕ ನಡುವೆ ವರ್ಧಿಸುತ್ತಿರುವ ವ್ಯಾವಹಾರಿಕ ಪಾಲುದಾರಿಕೆಯ ಪ್ರಬಲ ಪ್ರತಿಪಾದಕರು ಮತ್ತು ಐತಿಹಾಸಿಕ ಪರಮಾಣು ಒಪ್ಪಂದದ ಬೆಂಬಲಿಗರೂ ಹೌದು. ಆದರೆ ಅಮೆರಿಕದ ಉದ್ಯೋಗದ ಹೊರಗುತ್ತಿಗೆ ಸಂಬಂಧಿಸಿದಂತೆ ಅವರ ನಿಲುವು ಭಾರತೀಯ ವ್ಯವಹಾರ ಕ್ಷೇತ್ರದ ಕಳವಳಕ್ಕೆ ಕಾರಣವಾಗಿರುವ ಸಂಗತಿ.

ಅಮೆರಿಕದ ಮೊದಲ ಕರಿಯ ಜನಾಂಗೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಭಾರತೀಯ ಸಂಸ್ಕೃತಿಯ ಬಗ್ಗೆ ವಿಶೇಷ ಆಸ್ಥೆ ಉಳ್ಳವರಾಗಿದ್ದಾರೆ. ಅವರ ಬಳಿ ಅದೃಷ್ಟಕ್ಕಾಗಿ ಇರಿಸಿಕೊಂಡಿರುವ ಹನುಮಾನ್‌ನ ಪುಟ್ಟ ವಿಗ್ರಹವೊಂದಿದೆ ಮತ್ತು ತಮ್ಮ ಸೆನೆಟ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನೂ ಇರಿಸಿಕೊಂಡಿದ್ದಾರೆ.

ಭಾರತ 62ನೇ ಸ್ವಾತಂತ್ರ್ಯೋತ್ಸವ ಸಂದರ್ಭ ಒಬಾಮ ಕಳುಹಿಸಿದ ಸಂದೇಶದಲ್ಲಿ, "ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಸಕ್ರಿಯ ಪಾತ್ರವು, ತಮ್ಮ ತಮ್ಮ ದೇಶಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವಲ್ಲಿ ವಿಶ್ವಾದ್ಯಂತ ಇರುವ ಯುವ ಪೀಳಿಗೆಗೆ ಆದರ್ಶಪ್ರಾಯ" ಎಂದು ಹೇಳಿದ್ದರು.

"ಸ್ವಾತಂತ್ರ್ಯ ಎಂಬುದು ವಿಶ್ವದ ಹಲವು ಭಾಗಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದು, ಗಾಂಧೀಜಿಯವರ ಉದಾಹರಣೆಯು ಅತ್ಯಂತ ಹೆಚ್ಚು ಪ್ರಸ್ತುತವಾಗುತ್ತದೆ. ಈ ಪರಂಪರೆಯು ಭಾರತದ ಕ್ರಾಂತಿಯ ಪರಮೋನ್ನತ ಕೊಡುಗೆಗಳಲ್ಲೊಂದು" ಎಂದವರು ಹೇಳಿದ್ದರು.

ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ದೊಡ್ಡ ಸಾಂವಿಧಾನಿಕ ಪ್ರಜಾಪ್ರಭುತ್ವ ರಾಷ್ಟ್ರಗಳೆರಡು 'ಬಲವಾದ ಅನುಬಂಧ' ಹೊಂದಿರುವುದು 'ಅತ್ಯಂತ ಸ್ವಾಭಾವಿಕ' ಎಂದು ಅಭಿಪ್ರಾಯಪಡುವ ಒಬಾಮ, ಉಭಯ ರಾಷ್ಟ್ರಗಳು ಹಲವು ಸಮಾನ ಗುರಿ ಮತ್ತು ಹಿತಾಸಕ್ತಿಗಳನ್ನು ಹೊಂದಿವೆ. ಅಮೆರಿಕವು ಭಾರತದ ಅತಿದೊಡ್ಡ ವ್ಯಾವಹಾರಿಕ ಮತ್ತು ಹೂಡಿಕೆ ಪಾಲುದಾರ ಎಂದು ಅಭಿಪ್ರಾಯಪಟ್ಟಿದ್ದರು.

ಆರಂಭದಲ್ಲಿ ಒಬಾಮ ಅವರು ಅಣು ಒಪ್ಪಂದದ ಬಗ್ಗೆ ಹಿಂಜರಿಕೆ ತೋರಿದ್ದರು ಮಾತ್ರವಲ್ಲದೆ, ಈ ಒಪ್ಪಂದವು ಮೊದಲು ವಿದೇಶಾಂಗ ವ್ಯವಹಾರಗಳ ಸಮಿತಿಯಲ್ಲಿ ಚರ್ಚೆಗೆ ಬಂದಾಗ, 'ಮಾರಕ ತಿದ್ದುಪಡಿ'ಗಳನ್ನೂ ಪ್ರಸ್ತಾಪಿಸಿದ್ದರು. ಆದರೆ ಆ ಬಳಿಕ ಅವರು ಸೆನೆಟ್ ಸದನದಲ್ಲೂ ಹೊರಗೂ ಅದನ್ನು ಬಲವಾಗಿ ಬೆಂಬಲಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮ ಜಯ ಭಾರತಕ್ಕೆ ವರದಾನವೇ?
ಮೆಕ್ಸಿಕೊ : ವಿಮಾನ ದುರಂತದಲ್ಲಿ ಸಚಿವ ಸಾವು
ಒಬಾಮ ಜಯಕ್ಕೆ ವಿಶ್ವಾದ್ಯಂತ ಅಭಿನಂದನೆ ಸುರಿಮಳೆ
ಅಮೆರಿಕ ಉಪಾಧ್ಯಕ್ಷ ಪಟ್ಟಕ್ಕೆ 'ಬಿಡೆನ್'
ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಶ್ವೇತಭವನಕ್ಕೆ ಕರಿಯ ಅಧ್ಯಕ್ಷ: ಹಾಲಿವುಡ್‌ನಿಂದ ವಾಸ್ತವಕ್ಕೆ