ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮ ಗೆಲುವು ಪಾಕಿಸ್ತಾನಕ್ಕೆ ಆತಂಕ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮ ಗೆಲುವು ಪಾಕಿಸ್ತಾನಕ್ಕೆ ಆತಂಕ !
ವಿಶ್ವದ ಮಹಾನ್ ಪ್ರಜಾಪ್ರಭುತ್ವ ದೇಶದ ಅಧ್ಯಕ್ಷಗಾದಿಯನ್ನು ಕಪ್ಪು ವರ್ಣಿಯ ಬರಾಕ್ ಹುಸೇನ್ ಒಬಾಮ ಅವರು ಏರಿರುವುದನ್ನು ವಿಶ್ವದಾದ್ಯಂತ ಹರ್ಷ ವ್ಯಕ್ತವಾಗುತ್ತಿದ್ದರೆ, ಪಾಕಿಸ್ತಾನಕ್ಕೆ ಇದು ಕೆಟ್ಟ ಸುದ್ದಿಯಾಗಿ ಪರಿಣಮಿಸಿದೆ.

ಯಾಕೆಂದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಬೆನ್ನಲ್ಲೇ, ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಬರಾಕ್ ಒಬಾಮ ಅವರು ಆಗೋಸ್ಟ್ ತಿಂಗಳ ಪ್ರಚಾರ ಸಂದರ್ಭದಲ್ಲಿ, ತಾನು ಚುನಾವಣೆಯಲ್ಲಿ ಜಯ ಗಳಿಸಿದರೆ ಪಾಕ್ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್ ಮತ್ತು ಅಲ್ ಕೈದಾ ಉಗ್ರರ ಹುಟ್ಟಡಗಿಸುತ್ತೇನೆ ಎಂಬುದಾಗಿ ಘೋಷಿಸಿದ್ದರು.

ಅಲ್ಲದೇ ಇತ್ತೀಚೆಗಷ್ಟೇ ನಿಜಕ್ಕೂ ಭಾರತ ಪಾಕಿಸ್ತಾನಕ್ಕೆ ದೊಡ್ಡ ಆತಂಕವನ್ನು ತಂದೊಡ್ಡುತ್ತಿಲ್ಲ, ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆಯೇ ದೊಡ್ಡ ಸಮಸ್ಯೆಯಾಗಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಬರಾಕ್ ಒಬಾಮ ಅವರು ಭಯೋತ್ಪಾದನೆ, ಅಲ್ ಕೈದಾ, ತಾಲಿಬಾನ್‌ನಂತಹ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಠಿಣ ನಿಲುವು ತಳೆಯುವ ಮುನ್ಸೂಚನೆ ನೀಡಿರುವುದು ಇದೀಗ ಪಾಕ್‌ಗೆ ತ್ರಿಶಂಕು ಸ್ಥಿತಿಯನ್ನು ತಂದೊಡ್ಡಿದೆ.

ಏತನ್ಮಧ್ಯೆ ಬರಾಕ್ ಒಬಾಮ ಅವರ ಗೆಲುವನ್ನು ಪಾಕ್ ಸ್ವಾಗತಿಸುವುದಾಗಿ ಹೇಳಿದೆ, ಅಲ್ಲದೇ ಒಬಾಮ ಮುಂದೆ ಬಹಳಷ್ಟು ಕಠಿಣ ಸವಾಲುಗಳು ಇವೆ, ಇರಾಕ್ ಸೈನ್ಯ ಹಿಂತೆಗೆತ, ಕಾಶ್ಮೀರ ಸಮಸ್ಯೆ, ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಅಮೆರಿಕ ಸೈನ್ಯ ಪಡೆ ಹೀಗೆ ಹಲವಾರು ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕಾದ ಮಹತ್ತರವಾದ ಜವಾಬ್ದಾರಿ ಅವರ ಮೇಲಿದೆ.

ಪಾಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಡೆನ್ ಪಾಕ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿಲ್ಲ, ಮುಖ್ಯವಾದ ಅಂಶ ಏನೆಂದರೆ ಬರಾಕ್ ಪಾಕ್-ಅಫ್ಘಾನ್ ಗಡಿಯಲ್ಲಿ ನೆಲೆಯೂರಿರುವ ಉಗ್ರರ ಬಗ್ಗೆ ತಳೆದಿರುವ ನಿಲುವ ಆತಂಕ ತಂದೊಡ್ಡಿದೆ.

ಅಫ್ಘಾನಿಸ್ತಾನಕ್ಕೆ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸುವುದಾಗಿಯೂ ಹೇಳಿದ್ದರು. ಈಗಾಗಲೇ ತಾಲಿಬಾನ್ ಮುಖಂಡ, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಪಡೆಯನ್ನು ಹಿಂತೆಗೆಯುವಂತೆ ಎಚ್ಚರಿಕೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮ ಗೆಲುವು ಕೀನ್ಯಾಕ್ಕೆ ರಾಷ್ಟ್ರೀಯ ರಜಾ ದಿನ
ಭಾರತಕ್ಕೆ ಹೊರಗುತ್ತಿಗೆ: ತೊಡಕಾದಾರೇ ಒಬಾಮ?
ಒಬಾಮ ಜಯ ಭಾರತಕ್ಕೆ ವರದಾನವೇ?
ಮೆಕ್ಸಿಕೊ : ವಿಮಾನ ದುರಂತದಲ್ಲಿ ಸಚಿವ ಸಾವು
ಒಬಾಮ ಜಯಕ್ಕೆ ವಿಶ್ವಾದ್ಯಂತ ಅಭಿನಂದನೆ ಸುರಿಮಳೆ
ಅಮೆರಿಕ ಉಪಾಧ್ಯಕ್ಷ ಪಟ್ಟಕ್ಕೆ 'ಬಿಡೆನ್'