ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇರಾಕ್-ತುರ್ಕಿ ತೈಲ ಕೊಳವೆ ಸ್ಫೋಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾಕ್-ತುರ್ಕಿ ತೈಲ ಕೊಳವೆ ಸ್ಫೋಟ
ಇರಾಕ್‌ನಿಂದ ದಕ್ಷಿಣ ಟರ್ಕಿಗೆ ಕೊಳವೆಯ ಮ‌ೂಲಕ ಸರಜುರಾಜು ಆಗುತ್ತಿರುವ ತೈಲ ಕೊಳವೆಯಲ್ಲಿ ಸ್ಫೋಟ ಉಂಟಾದ ಪರಿಣಾಮ ತುಂಬಾ ಪ್ರಮಾಣದ ಅನಿಲವು ಸೋರಿಕೆಯುಂಟಾಗಿದೆಯೆಂದು ಅನಾಟೋಲಿಯ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಆಗ್ನೇಯ ತುರ್ಕಿಯ ಸಾನ್‌ಲಿರ್ಪದ ಕುರ್ದಿಸ್ ಪ್ರಾಂತ್ಯದ ಒಂದು ಭಾಗದಲ್ಲಿ ಹಾದು ಹೋಗಿದ್ದ ತೈಲಕೊಳವೆಯಲ್ಲಿ ಬುಧವಾರ ರಾತ್ರಿ ಸ್ಫೋಟಸಂಭವಿಸಿದೆ. ಪ್ರಾಥಮಿಕ ತನಿಖೆಯಂತೆ ತೈಲ ಕೊಳವೆಯಲ್ಲಿ ಹೆಚ್ಚಿದ ಒತ್ತಡದಿಂದಾಗಿ ಹಠಾತ್ತಾಗಿ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯೇಕತವಾದಿ ಕುರ್ದಿಸ್ ಬಂಡುಕೋರರು ಈ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ. ಕೆಲವು ಸಮಯಗಳ ಹಿಂದೆ ಇರಾಕ್‌ನ ಉತ್ತರ ನಗರಪ್ರದೇಶವಾದ ಕಿರ್‌ಕುಕ್‌ನಿಂದ ಟರ್ಕಿಯ ಮೆಡಿಟೇರಿಯನ್ ಪೊರ್ಟ್‌‌ನ ಸಿಹಾನ್ ಪ್ರದೇಶದಲ್ಲಿ ಹಾದುಹೋಗುತ್ತಿರುವ ಈ ಕೊಳವೆಯಲ್ಲಿ 70 ಮಿಲಿಯನ್ ಟನ್ ವರ್ಷದಲ್ಲಿ ತೈಲ ಸರಬರಾಜು ಆಗುತ್ತಿರುವ ಜೋಡಿ ಕೊಳವೆಯನ್ನು ಕುರ್ದಿಸ್ ದಂಗೆಕೋರರು ಸ್ಘೋಟಿಸಿದ್ದರು.

ಕೊಳವೆಯಲ್ಲಿಂಟಾದ ಸ್ಫೋದಲ್ಲಿ ಅನಿಲದ ಸೋರಿಕೆಯ ಕಾರಣ ಅಧಿಕಾರಿಗಳು ನಲ್ಲಿಯನ್ನು ಮುಚ್ಚುಗಡೆಗೊಳಿಸಿದರು. ಎರಡು ಕಿ.ಮೀ. ದೂರದ ಪ್ರಧಾನ ಅಣೆಕಟ್ಟಿನ ಪ್ರದೇಶದ ವರೆಗೆ ಅನಿಲದ ಸೋರಿಕೆಯುಂಟಾಗಿದೆಯೆಂದು ಅನಾಟೋಲಿಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತೈಲ ಕೊಳವೆಯನ್ನು ಪುನರ್ ಜೋಡಿಕೆಯ ಬಗ್ಗೆ ತಕ್ಷಣ ಯಾವುದೇ ವರದಿಗಳು ಲಭಿಸಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮ ಗೆಲುವು ಪಾಕಿಸ್ತಾನಕ್ಕೆ ಆತಂಕ !
ಒಬಾಮ ಗೆಲುವು ಕೀನ್ಯಾಕ್ಕೆ ರಾಷ್ಟ್ರೀಯ ರಜಾ ದಿನ
ಭಾರತಕ್ಕೆ ಹೊರಗುತ್ತಿಗೆ: ತೊಡಕಾದಾರೇ ಒಬಾಮ?
ಒಬಾಮ ಜಯ ಭಾರತಕ್ಕೆ ವರದಾನವೇ?
ಮೆಕ್ಸಿಕೊ : ವಿಮಾನ ದುರಂತದಲ್ಲಿ ಸಚಿವ ಸಾವು
ಒಬಾಮ ಜಯಕ್ಕೆ ವಿಶ್ವಾದ್ಯಂತ ಅಭಿನಂದನೆ ಸುರಿಮಳೆ