ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಂಚನೆ ಆರೋಪ : ಒಲ್‌ಮರ್ಟ್ ವಿಚಾರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಂಚನೆ ಆರೋಪ : ಒಲ್‌ಮರ್ಟ್ ವಿಚಾರಣೆ
ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿರುವ ಇಸ್ರೇಲ್‌‌‌ನ ಉಸ್ತುವಾರಿ ಪ್ರಧಾನಮಂತ್ರಿ ಯಹೂದ್ ಒಲ್‌ಮರ್ಟ್ ಅವರು ಒಂಭತ್ತನೆ ಬಾರಿಗೆ ಕೇಂದ್ರ ಭ್ರಷ್ಟಾಚಾರ ತನಿಖಾದಳದಿಂದ ವಿಚಾರಣೆಯನ್ನು ಎದುರಿಸಲಿದ್ದಾರೆ. ಇಸ್ರೇಲ್‌‌ನ ಕದೀಮಾ ಪಕ್ಷದವರಾದ ಒಲ್‌ಮೆರ್ಟ್ ಸ್ವಪಕ್ಷ ಮತ್ತು ಸಮ್ಮಿಶ್ರ ಪಕ್ಷದ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದರು.

ಶುಕ್ರವಾರ ಜೆರುಸಲೆಮ್‌ನ ಅಧಿಕೃತ ಬಂಗಾಲೆಯಲ್ಲಿ ಪ್ರಧಾನ ಮಂತ್ರಿಯವರ ವಿಚಾರಣೆ ನಡೆಯಲಿದೆಯೆಂದು ರಾಷ್ಟ್ರೀಯ ಪೊಲೀಸ್ ಆಯುಕ್ತರಾದ ಮಿಕ್ಕಿ ರಾಸೆನ್‌ಪೆಡ್ಟ್ ತಿಳಿಸಿದರು. ಸರಿಸುಮಾರು ಎರಡು ಘಂಟೆಗಳ ಕಾಲ ವಿಚಾರಣೆ ನಡೆಯಲಿದೆಯೆಂದು ಅವರು ಹೇಳಿದರು.

ಒಲ್‌ಮರ್ಟ್ ಆಗಸ್ಟ್ ತಿಂಗಳಿನಲ್ಲಿ ಅಧಿಕಾರ ತ್ಯಜಿಸುವುದಾಗಿ ಘೋಷಿಸಿದ್ದು ಇದರಿಂದಾಗಿ ಕದೀಮಾ ಪಕ್ಷದವರಿಂದ ಹೊಸ ಅಧಿಕಾರಿಯ ಆಯ್ಕೆಯನ್ನು ಮಾಡಲಾಯಿತು.

ಹೊಸದಾಗಿ ಆಯ್ಕೆಗೊಂಡ ಕದೀಮಾ ಪಕ್ಷದವರಾದ ವಿದೇಶಾಂಗ ಸಚಿವ ಟಿಪಿ ಲಿವ್‌ನಿ 'ಲಿಸೆಟ್' ಪಾರ್ಲಿಮೆಂಟ್‌ನಲ್ಲಿ ಬಹುಮತವನ್ನು ಪಡೆಯುವುದರಲ್ಲಿ ವಿಫಲರಾಗಿದ್ದರ ಪರಿಣಾಮ ಅಧ್ಯಕ್ಷರು ಚುನಾವಣೆಗೆ ಆದೇಶ ನೀಡಿದ್ದರು.

ಹೊಸ ಸರಕಾರ ರಚನೆಗೆ 2009ರ ಫೆಬ್ರುವರಿ 10ರಂದು ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಪ್ರಧಾನಿಯವರು ಅಧಿಕಾರ ನಿರ್ವಹಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇರಾಕ್-ತುರ್ಕಿ ತೈಲ ಕೊಳವೆ ಸ್ಫೋಟ
ಒಬಾಮ ಗೆಲುವು ಪಾಕಿಸ್ತಾನಕ್ಕೆ ಆತಂಕ !
ಒಬಾಮ ಗೆಲುವು ಕೀನ್ಯಾಕ್ಕೆ ರಾಷ್ಟ್ರೀಯ ರಜಾ ದಿನ
ಭಾರತಕ್ಕೆ ಹೊರಗುತ್ತಿಗೆ: ತೊಡಕಾದಾರೇ ಒಬಾಮ?
ಒಬಾಮ ಜಯ ಭಾರತಕ್ಕೆ ವರದಾನವೇ?
ಮೆಕ್ಸಿಕೊ : ವಿಮಾನ ದುರಂತದಲ್ಲಿ ಸಚಿವ ಸಾವು