ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭೂತಾನ್: ನೂತನ 'ಯುವರಾಜ'ನ ಪಟ್ಟಾಭಿಷೇಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭೂತಾನ್: ನೂತನ 'ಯುವರಾಜ'ನ ಪಟ್ಟಾಭಿಷೇಕ
ಜಗತ್ತಿನ ನೂತನ ಪ್ರಜಾಪ್ರಭುತ್ವ ದೇಶವಾಗಿ ರೂಪು ತಳೆದಿರುವ ಹಿಮಾಲಯನ್ ಕಿಂಗ್‌ಡಮ್ ಭೂತಾನ್ ಹೊಸ ರಾಜನಾಗಿ ಆಕರ್ಷಕ ವ್ಯಕ್ತಿತ್ವ ಹೊಂದಿದ 28ರ ಹರೆಯದ ಆಕ್ಸಫರ್ಡ್ ಪದವೀಧರ ಸಿಂಹಾಸನರೂಢರಾಗಿ ಕಿರೀಟಧಾರಣೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಪಂಚದ ಉಳಿದೆಲ್ಲ ದೇಶಗಳು ಅಮೆರಿಕ ಚುನಾವಣೆಯಲ್ಲಿ ಜಯಶಾಲಿಯಾಗಿ ಇತಿಹಾಸ ನಿರ್ಮಿಸಿರುವ ಬರಾಕ್ ಹುಸೇನ್ ಒಬಾಮ ಅವರ ಗುಂಗಿನಲ್ಲಿದ್ದ, ಬಳಿಕ ಎಲ್ಲರ ದೃಷ್ಟಿ ಭೂತಾನ್ ಮೇಲೆ ನೆಟ್ಟಿತ್ತು.
PTI
ಗುರುವಾರ 28ರ ಹರೆಯದ ಜಿಗ್ಮೆ ಖೆಸಾರ್ ನಾಮ್‌‌‌ಗೆಯ್ಲ್ ವಾಂಗ್‌ಚುಕ್ ನೂತನ ರಾಜನಾಗಿ ಅಧಿಕಾರ ಸ್ವೀಕರಿಸುವ ಮೂಲಕ, ಜಗತ್ತಿನ ಅತಿ ಕಿರಿಯ ರಾಜ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

ತಿಂಫು ಕಣಿವೆಯಲ್ಲಿರುವ ಪುರಾತನವಾದ ಶ್ವೇತವರ್ಣದ ಗೋಡೆ ಹೊಂದಿರುವ ಅರಮನೆಯಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ವಾಂಗ್‌ಚುಕ್‌ಗೆ ತಂದೆ ಭೂತಾನ್‌ನ ರಾವೆನ್ ಕ್ರೌನ್ ಅನ್ನು ತೊಡಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಕಳೆದ ಮಾರ್ಚ್ ತಿಂಗಳಲ್ಲಿ ರಾಜಪ್ರಭುತ್ವಕ್ಕೆ ತಿಲಾಂಜಲಿ ಇತ್ತ ಭೂತಾನ್, ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಯನ್ನು ನಡೆಸುವ ಮೂಲಕ ನೂತನ ಸಂಸತ್ ಹಾಗೂ ಪ್ರಧಾನಿಯನ್ನು ಆಯ್ಕೆ ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಂಚನೆ ಆರೋಪ : ಒಲ್‌ಮರ್ಟ್ ವಿಚಾರಣೆ
ಇರಾಕ್-ತುರ್ಕಿ ತೈಲ ಕೊಳವೆ ಸ್ಫೋಟ
ಒಬಾಮ ಗೆಲುವು ಪಾಕಿಸ್ತಾನಕ್ಕೆ ಆತಂಕ !
ಒಬಾಮ ಗೆಲುವು ಕೀನ್ಯಾಕ್ಕೆ ರಾಷ್ಟ್ರೀಯ ರಜಾ ದಿನ
ಭಾರತಕ್ಕೆ ಹೊರಗುತ್ತಿಗೆ: ತೊಡಕಾದಾರೇ ಒಬಾಮ?
ಒಬಾಮ ಜಯ ಭಾರತಕ್ಕೆ ವರದಾನವೇ?