ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬರಾಕ್ ಒಬಾಮರೊಂದಿಗೆ ಹೊಸ ಶಾಂತಿ ಯುಗದ ಗುರಿಯನ್ನಿಟ್ಟುಕೊಂಡಿರುವ ತಾಲಿಬಾನ್ ಅಫ್ಘಾನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಿ ಈಗಿರುವ ವಿದೇಶಾಂಗ ನೀತಿಯನ್ನು ಬದಲಾಯಿಸಬೇಕೆಂದು ವಿನಂತಿ ಮಾಡಿಕೊಂಡಿದೆ. ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ಒಬಾಮರ ವಿಜಯದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಉನ್ನತ ತಾಲಿಬಾನ್ ವಕ್ತಾರರಾದ ಖ್ವಾರಿ ಮುಹಮ್ಮದ್ ಯೂಸಫ್ ಅಹಮ್ಮದಿ, ಅಫ್ಘಾನ್‌ಲ್ಲಿ ನೆಲೆನಿಂತಿರುವ ಪಾಶ್ಚಾತ್ಯ ದೇಶಗಳ ಹಾಗೂ ಇಡೀ ವಿಶ್ವದ ಸೈನ್ಯವನ್ನು ಹಿಂತೆಗೆಯಬೇಕೆಂದು ಆಗ್ರಹಿಸಿದ್ದು, ಈಗಿನ ಬುಶ್ ಸರಕಾರವು ತನ್ನ ವಿದೇಶಾಂಗ ನೀತಿಯಿಂದ ಮಹತ್ವವನ್ನು ಕಳೆದುಕೊಂಡಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ಅಫ್ಘಾನ್‌ನ ಸಮಸ್ಯೆಯನ್ನು ಒಬಾಮ ಮಿಲಿಟರಿ ಮೂಲಕ ಬಗೆಹರಿಸಲು ಶ್ರಮಿಸಿದರೆ ಅದು ಅವರ ಅವಿವೇಕವಾಗಿರುವುದು ಮತ್ತು ಅಫ್ಘಾನಿಸ್ಥಾನದಲ್ಲಿ ಹೆಚ್ಚು ಸೈನ್ಯವನ್ನು ನಿಯೋಜಿಸಿದರೆ ಅದು ಅವರ ತಪ್ಪು ಯೋಜನೆಯಾಗಿರುವುದೆಂದು ಇನ್ನೂಬ್ಬ ತಾಲಿಬಾನ್ ವಕ್ತಾರ ಜಬಿಯುಲ್ಲಹ ಮುಜಾಹಿದ್ ತಿಳಿಸಿದರು.
ರಷ್ಯನ್ನರು ಸಾವಿರಾರು ಸೈನ್ಯವನ್ನುಪಯೋಗಿಸಿ ಅಫ್ಘಾನಿಸ್ಥಾನವನ್ನು ಹಿಮ್ಮಟ್ಟಿಸಲು ನಡೆಸಿದ ಶ್ರಮವನ್ನು ಅವರು ಈ ಸಮಯದಲ್ಲಿ ಉಲ್ಲೇಖಿಸಿದರು. |